
ಕಾರ್ಕಳ,ನ.18: ಪ್ರಚೋದನಾಕಾರಿ ಭಾಷಣ ಆರೋಪದಲ್ಲಿ ಹಿಂದೂ ಮುಖಂಡ ರತ್ನಾಕರ ಅಮೀನ್ ಅವರನ್ನು ಇಂದು ಮುಂಜಾನೆ ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಉಡುಪಿ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟವನ್ನು ಖಂಡಿಸಿ ಉಡುಪಿಯಲ್ಲಿ ನ.15 ರಂದು ನಡೆದ ಪ್ರತಿಭಟನೆಯಲ್ಲಿ ರತ್ನಾಕರ ಅಮೀನ್ ಅವರು ದ್ವೇಷ ಭಾಷಣ ಮಾಡಿದ್ದಾರೆ ಎಂದು ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇಂದು ಬೆಳಗ್ಗೆ ಅವರು ತಿರುಪತಿ ಯಾತ್ರೆ ಮುಗಿಸಿ ರೈಲಿನಲ್ಲಿ ಹಿಂತಿರುಗಿದ ವೇಳೆ ಉಡುಪಿ ಪೊಲೀಸರು ಬಂಧಿಸಿದ್ದಾರೆ.
ರತ್ನಾಕರ್ ಅಮೀನ್ ಬಂಧನಕ್ಕೆ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

