
ಹೆಬ್ರಿ : ಅಲಯನ್ಸ್ ಜಿಲ್ಲೆ 275 S ವ್ಯಾಪ್ತಿಯ ನೂತನವಾಗಿ ಆರಂಭಗೊಂಡ ಅಲಯನ್ಸ್ ಕ್ಲಬ್ ಹೆಬ್ರಿ ಇದರ ಅಧ್ಯಕ್ಷರಾಗಿ ಅಲೈ ಕೆ. ರಾಮಚಂದ್ರ ಭಟ್ ಆಯ್ಕೆಯಾಗಿದ್ದಾರೆ.
ಕೆ. ರಾಮಚಂದ್ರ ಭಟ್ ಇವರು ಗಣೇಶೋತ್ಸವ ಸಮಿತಿ, ಲಯನ್ಸ್ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಇನ್ನೂ ಹಲವು ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಮುಖಿ ಸೇವೆಗಳನ್ನು ಸಲ್ಲಿಸಿರುತ್ತಾರೆ.
ಅಲಯನ್ಸ್ ಕ್ಲಬ್ ಹೆಬ್ರಿ ಇದರ ಕಾರ್ಯದರ್ಶಿಯಾಗಿ ಅಲೈ ಮುದ್ರಾಡಿ ಬಾಲಚಂದ್ರ ಎಂ. ಮತ್ತು ಕೋಶಾಧಿಕಾರಿಯಾಗಿ ನ್ಯಾಯವಾದಿ ಅಲೈ ಸುರೇಶ್ ಪೂಜಾರಿ ಆಯ್ಕೆಯಾಗಿರುತ್ತಾರೆ.
ಅಲಯನ್ಸ್ ಜಿಲ್ಲೆ 275 S ರ ಪ್ರಥಮ ಉಪ ಜಿಲ್ಲಾ ಗವರ್ನರ್ ಅಲೈ ಸುನೀಲ್ ಕುಮಾರ್ ಶೆಟ್ಟಿ ಮತ್ತು ದ್ವಿತೀಯ ಉಪ ಜಿಲ್ಲಾ ಗವರ್ನರ್ ಅಲೈ ಸುಧಾಕರ್ ಹೆಗ್ಡೆ ಇವರ ಮಾರ್ಗದರ್ಶನದಲ್ಲಿ ಅಲಯನ್ಸ್ ಕ್ಲಬ್ ಹೆಬ್ರಿ ಆರಂಭಗೊಂಡಿರುತ್ತದೆ. ಅಲಯನ್ಸ್ ಕ್ಲಬ್ ಹೆಬ್ರಿ ಇದರ ಸದಸ್ಯರಿಗೆ ಹಾಗೂ ನೂತನ ಪದಾಧಿಕಾರಿಗಳಿಗೆ ಅಲಯನ್ಸ್ ಜಿಲ್ಲೆ 275 S ರ ಜಿಲ್ಲಾ ಗವರ್ನರ್ ಅಲೈ ಸುನೀಲ್ ಸಾಲ್ಯಾನ್ ಕಡೆಕಾರ್ ಅಭಿನಂದನೆ ಸಲ್ಲಿಸಿರುತ್ತಾರೆ.
ಸಭೆಯಲ್ಲಿ ನೂತನ ಅಧ್ಯಕ್ಷ ಕಬ್ಬಿನಾಲೆ ರಾಮಚಂದ್ರ ಭಟ್ ಸ್ವಾಗತಿಸಿದರು, ಕಾರ್ಯದರ್ಶಿ ಬಾಲಚಂದ್ರ ಮುದ್ರಾಡಿ ವಂದಿಸಿದರು.
