
ಕಾರ್ಕಳ, ಡಿ.17: ಶ್ರೀನಿವಾಸ ವಿಶ್ವವಿದ್ಯಾಲಯದಿಂದ ಶ್ರೀಮತಿ ಸುಧೀಕ್ಷಾ ಪೈ ಅವರು “A Psychoanalytical Study of Women Protagonists in Select Novels of Preeti Shenoy” ಎಂಬ ಶೀರ್ಷಿಕೆಯ ಪ್ರಬಂಧವನ್ನು ಯಶಸ್ವಿಯಾಗಿ ನಿರ್ವಹಿಸಿ Ph.D. ಪದವಿಯನ್ನು ಪಡೆದಿದ್ದಾರೆ. ಶ್ರೀಯುತ ಲೂರ್ದುಸ್ವಾಮಿ ಮಾರ್ಗದರ್ಶನದಲ್ಲಿ ಈ ಸಂಶೋಧನೆಯನ್ನು ಪೂರ್ಣಗೊಂಡಿದೆ.
ಸುಧೀಕ್ಷಾ ಪೈಯವರು ಕಾರ್ಕಳ ಕ್ರಿಯೇಟಿವ್ ಪಿಯು ಕಾಲೇಜಿನ ಉಪನ್ಯಾಸಕರಾದ ಮಹೇಶ್ ಶೆಣೈ ಅವರ ಪತ್ನಿಯಾಗಿದ್ದು,ಅವರು ಕೂಡ ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ನಿಟ್ಟೆ NMAMIT ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಪ್ರೀತಿ ಶೆಣೈ ಅವರ ಕಾದಂಬರಿಗಳಲ್ಲಿನ ಮಹಿಳಾ ನಾಯಕಿಯರ ಮನೋವೈಜ್ಞಾನಿಕ ಅಂಶಗಳ ವಿಶ್ಲೇಷಣೆಯು ಸುಧೀಕ್ಷಾ ಪೈ ಅವರ ಸಂಶೋಧನೆಗೆ ಶೈಕ್ಷಣಿಕ ವಲಯದಿಂದ ವಿಶಿಷ್ಟ ಮೆಚ್ಚುಗೆ ವ್ಯಕ್ತವಾಗಿದೆ.
.
.
