Share this news

ಕಾರ್ಕಳ,ಜ. 7 : ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕುಡಿಯುವ ನೀರು ಸರಬರಾಜಿಗಾಗಿ ಕಳೆದ ಒಂದು ವರ್ಷಗಳಿಂದ ನಿರಂತರವಾಗಿ ಅವೈಜ್ಞಾನಿಕವಾಗಿ ರಸ್ತೆ ಅಗೆದು ನೀರು ಸರಬರಾಜು ಆಗುತ್ತಿದ್ದ ಪೈಪ್ ಲೈನ್ ಕಿತ್ತುಹೋಗಿ ನಳ್ಳಿನೀರು ಸಂಪರ್ಕ ಕಡಿತಗೊಂಡಿದ್ದು, ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಇದಕ್ಕೆ ಜಲಮಂಡಳಿ ನೇರ ಹೊಣೆ ಎಂದು ಆರೋಪಿಸಿ ಕಾರ್ಕಳ ಪುರಸಭೆ ಮಾಜಿ ಅಧ್ಯಕ್ಷೆ, ನಿಕಟ ಪೂರ್ವ ಸದಸ್ಯೆ ಪ್ರತಿಮಾ ರಾಣೆ ನೇತೃತ್ವದಲ್ಲಿ ಪುರಸಭೆ ಕಚೇರಿಗೆ ಸಾರ್ವಜನಿಕರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಕಾರ್ಕಳ ಪುರಸಭೆಯ ಎಲ್ಲಾ ರಸ್ತೆಗಳು ಅಮೃತ ಯೋಜನೆಯ ಕಳಪೆ ಕಾಮಗಾರಿಯಿಂದಾಗಿ ಹದಗೆಟ್ಟು ಹೋಗಿವೆ. ಬಂಗ್ಲೆಗುಡ್ಡೆ, ಪತ್ತೊಂಜಿಕಟ್ಟೆ, ಗುಂಡ್ಯ, ಕಜೆ ಪರಿಸರದಲ್ಲಿ ನಳ್ಳಿಗಳಲ್ಲಿ ಕೆಸರು ನೀರು ಬರುತ್ತಿದ್ದು ಜನ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಆದ್ದರಿಂದ ಕೂಡಲೇ ಸಂಬಂಧ ಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಮಂಗಳೂರು ನಗರ ನೀರು ಸರಬರಾಜು ಮಂಡಳಿ ಕಚೇರಿಗೆ ಮುತ್ತಿಗೆ ಹಾಕಲಾಗವುದು ಎಂದು ಪ್ರತಿಮಾ ರಾಣೆ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷೆ ರೆಹಮತ್ ನವೀದ್ ನಾಸಿರ್ ಶೇಕ್, ನಿಕಟ ಪೂರ್ವ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ್, ಸದಸ್ಯರಾದ ವಿವೇಕಾನಂದ ಶೆಣೈ, ಸಾಮಾಜಿಕ ಮುಂದಾಳು ಪ್ರಸನ್ನ ಉಪಸ್ಥಿತರಿದ್ದರು.

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *