
ಕಾರ್ಕಳ,ಜ.8: ಅಂತರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿಯಲ್ಲಿ ಜನವರಿ ತಿಂಗಳನ್ನು ‘ವೃತ್ತಿ ಸೇವಾ ಮಾಸಾಚಾರಣೆ’ಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಿನ್ನಲೆಯಲ್ಲಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಸಂಸ್ಥೆಯವರಿಂದ ಕಾರ್ಕಳದ ವಿವಿಧ ಕ್ಷೇತ್ರಗಳಲ್ಲಿನ ಬೇರೆ ಬೇರೆ ವೃತ್ತಿಗಳನ್ನು ಪ್ರಾಮಾಣಿಕವಾಗಿ ಮಾಡುತ್ತಿರುವ 9 ಜನರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು.
ಡಾll ಟಿ ಎಮ್ ಎ ಪೈ ರೋಟರಿ ಆಸ್ಪತ್ರೆಯ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಸೇನೆಯಿಂದ ನಿವೃತ್ತಗೊಂಡ ಸುಭೇದಾರ್ ಪ್ರವೀಣ್ ಶೆಟ್ಟಿ, ಸೈಕಲ್ ರಿಪೇರಿ ವೃತ್ತಿ ಮಾಡುತ್ತಿರುವ ಕೆ. ಸದಾನಂದ, ಗ್ಯಾಸ್ ವೆಲ್ಡರ್ ಸುರೇಂದ್ರ ಎಸ್, ಆಟೋ ರಿಕ್ಷಾ ಚಾಲಕ ದಾಮೋದರ, ಕ್ಷೌರಿಕ ವೃತ್ತಿ ಮಾಡುತ್ತಿರುವ ಸತೀಶ ಸುವರ್ಣ, ಕಾರ್ಪೆಂಟರ್ ಪ್ರಸಾದ ಆಚಾರ್ಯ ಹಾಗೂ ಆಸ್ಪತ್ರೆಯ ಸಿಬ್ಬಂದಿ ಪ್ರೇಮ, ಶುಶ್ರೂಷಕಿ ಲೂವಿಜಾ ತೌರೋ ಮತ್ತು ಶಂಕರ ದೇವಾಡಿಗ ಇವರುಗಳನ್ನು ಸನ್ಮಾನಿಸಲಾಯಿತು. ಬಳಿಕ ಆಸ್ಪತ್ರೆಯ ಸಿಬ್ಬಂದಿಗಳಿಂದ ಹಾಗೂ ರೋಟರಿಯ ಕುಟುಂಬದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ರೋಟರಿ ಅಧ್ಯಕ್ಷ ಸುರೇಂದ್ರ ನಾಯಕ್ ಸ್ವಾಗತಿಸಿದರು.ಆಸ್ಪತ್ರೆ ಸಿಬ್ಬಂದಿಯವರೊಂದಿಗೆ ಉತ್ತಮ ಬಾಂಧವ್ಯ
ವನ್ನಿಟ್ಟುಕೊಂಡು ಇಂತಹ ಕಾರ್ಯಕ್ರಮವನ್ನು ಬಹಳ ಉತ್ತಮ ರೀತಿಯಾಗಿ ನಡೆಸಿ ಕೊಟ್ಟ ರೋಟರಿ ಸಂಸ್ಥೆಯವರ ಕಾರ್ಯವನ್ನು ವೈದ್ಯಾಧಿಕಾರಿ ಡಾll ಕೀರ್ತಿನಾಥ ಬಳ್ಳಾಲ್ ಪ್ರಶಂಸಿದರು.
ರೋಟರಿ ಮಾರ್ಗದರ್ಶಕರು ಮಾಜಿ ಜಿಲ್ಲಾ ಗವರ್ನರ್ ಡಾll ಭರತೇಶ್ ಆದಿರಾಜ್ ಮಾತನಾಡಿ, ರೋಟರಿಯಲ್ಲಿ ಜನವರಿ ತಿಂಗಳನ್ನು ವೃತ್ತಿ ಸೇವಾ ಮಾಸಾಚರಣೆಯನ್ನಾಗಿ ಆಚರಿಸುತ್ತಿದ್ದು ಸ್ಥಳೀಯ ವಿವಿಧ ಕ್ಷೇತ್ರಗಳಲ್ಲಿನ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನ ಮಾಡಿರುವುದು ನಿಜಕ್ಕೂ ಪ್ರಶಂಸನೀಯ. ಸನ್ಮಾನಗೊಂಡವರು ಇತರರಿಗೆ ಮಾದರಿಯಾಗಿರಲಿ ಅವರ ಜೀವನ ಫಲಪ್ರದವಾಗಲಿ ಎಂದು ಹಾರೈಸಿದರು. ವೃತ್ತಿ ಸೇವಾ ಸಭಾಪತಿ ನಿವೃತ್ತ ಪ್ರಾoಶುಪಾಲರಾದ ರೋl ಗಣೇಶ್ ಬರ್ಲಾಯ ಮತ್ತು ಆನ್ಸ್ ಅಧ್ಯಕ್ಷೆ ಶರ್ಮಿಳಾ ರಮೇಶ್ ಶೆಟ್ಟಿ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು ರೋl ಸುಬ್ರಮಣ್ಯ ಉಪಾಧ್ಯಾಯ ನಿರೂಪಿಸಿದರು.
ಮಾಡಿದರು.
ಆಸ್ಪತ್ರೆ ವೈದ್ಯರು, ಸಿಬ್ಬಂದಿ ವರ್ಗ ರೋಟರಿ ಸದಸ್ಯರು ಹಾಗೂ ಆಹ್ವಾನಿತರು ಉಪಸ್ಥಿತರಿದ್ದರು.

.
.
