
ಕಾರ್ಕಳ, ಜ. 09: ಅಜೆಕಾರು ಬ್ರದರ್ಸ್ ಕ್ರಿಕೆಟರ್ಸ್ ವತಿಯಿಂದ ಜ.10 ಹಾಗೂ 11 ರಂದು ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ ಆಹ್ವಾನಿತ ತಂಡಗಳ ಬ್ರದರ್ಸ್ ಟ್ರೋಫಿ-2026 ಕ್ರಿಕೆಟ್ ಪಂದ್ಯಾವಳಿಯು ಅಜೆಕಾರಿನ ವೈಟ್ ಫೀಲ್ಡ್(ಅದ್ರೊಟ್ ಬಾಕ್ಯಾರ್) ಮೈದಾನದಲ್ಲಿ ನಡೆಯಲಿದೆ.
ಅಜೆಕಾರು ಬ್ರದರ್ಸ್ ಕ್ರಿಕೆಟರ್ಸ್ ಗೆ 35 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಕಾರ್ಕಳ ಹಾಗೂ ಮೂಡುಬಿದಿರೆ ತಾಲೂಕಿನ ಒಟ್ಟು 28 ತಂಡಗಳು ಭಾಗವಹಿಸಲಿವೆ.
ಈ ಪೈಕಿ ಮೂಡುಬಿದಿರೆ ಹಾಗೂ ಕಾರ್ಕಳ ತಾಲೂಕಿನ ತಲಾ 4 ಆಹ್ವಾನಿತ ತಂಡಗಳು ಭಾಗವಹಿಸುತ್ತಿದ್ದು, ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ 20 ಸ್ಥಳೀಯ ತಂಡಗಳು ಭಾಗವಹಿಸಲಿವೆ.
ವಿಜೇತ ತಂಡಕ್ಕೆ 50,035 ರೂ ನಗದು ಬಹುಮಾನ ಹಾಗೂ ಟ್ರೋಫಿ ,ರನ್ನರ್ ಅಪ್ ತಂಡಕ್ಕೆ 25,035 ನಗದು ಹಾಗೂ ಟ್ರೋಫಿ ನೀಡಲಾಗುವುದು.
ಇದಲ್ಲದೇ ಉತ್ತಮ ಬ್ಯಾಟರ್, ಉತ್ತಮ ಬೌಲರ್, ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಬಹುಮಾನಗಳಿವೆ.
ಭಾಗವಹಿಸುವ ತಂಡಗಳಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಪಂದ್ಯಾವಳಿಯಲ್ಲಿ ಭಾಗವಹಿಸುವ ಆಟಗಾರರಿಗೆ ಬೆಳಗ್ಗೆ ಸಂಜೆ ಉಪಹಾರ ಹಾಗೂ ಮಧ್ಯಾಹ್ನ ಉಚಿತ ಭೋಜನದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬ್ರದರ್ಸ್ ಕ್ರಿಕೆಟರ್ಸ್ ಸ್ಥಾಪಕರು ಹಾಗೂ ಆಯೋಜಕರಾದ ಅಬ್ದುಲ್ ಗಫೂರ್ ತಿಳಿಸಿದ್ದಾರೆ.

.
.
