Share this news

­

 

ಮುನಿಯಾಲಿನ ಸಂಜೀವಿನಿ ಗೋಧಾಮದಲ್ಲಿ ಫೆ 19 ರಿಂದ 21ರ ವರೆಗೆ ದೊಂದಿ ಬೆಳಕಿನ ಏಕಪವಿತ್ರ ನಾಗಮಂಡಲೋತ್ಸವ, ಕೃಷಿ ವಿಚಾರಗೋಷ್ಠಿ, ರೈತಪೀಠ ಪ್ರಶಸ್ತಿ ಪ್ರದಾನ ಸಮಾರಂಭ

ಹೆಬ್ರಿ,ಫೆ.09: ಹೆಬ್ರಿ ತಾಲೂಕಿನ ವರಂಗ ಗ್ರಾಮದ ಮುನಿಯಾಲಿನ ಸಂಜೀವಿನಿ ಗೋಧಾಮದಲ್ಲಿನ ನಾಗಬನದಲ್ಲಿ ಫೆ 19ರಿಂದ 21ರವರೆಗೆ ಕೊರಂಗ್ರಪಾಡಿ ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ಪಾರಂಪರಿಕ ಸಂಪ್ರದಾಯದAತೆ ದೊಂದಿ ಬೆಳಕಿನಲ್ಲಿ ಏಕಪವಿತ್ರ ನಾಗಮಂಡಲೋತ್ಸವವು ನಡೆಯಲಿದೆ ಎಂದು ಸಂಜೀವಿನಿ ಗೋಧಾಮದ ಮುಖ್ಯಸ್ಥರಾದ ರಾಮಕೃಷ್ಣ ಆಚಾರ್ಯ ತಿಳಿಸಿದರು.
ಅವರು ಸಂಜೀವಿನಿ ಗೋಧಾಮದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ ನಾಗಾರಾಧನೆ ಎನ್ನುವುದು ಪ್ರಕೃತಿಯ ಆರಾಧನೆಯಾಗಿದೆ. ತುಳುನಾಡಿನ ಪವಿತ್ರ ನೆಲದಲ್ಲಿ ನಡೆಯಲಿರುವ ನಾಗ ಮಂಡಲೋತ್ಸವವು ಪುರಾತನ ಪಾರಂಪರಿಕೆ ಸಂಪ್ರದಾಯದAತೆ ಪ್ರಕೃತಿಯಿಂದ ಪ್ರಕೃತಿಗೆ ಎನ್ನುವ ಪರಿಕಲ್ಪನೆಯಲ್ಲಿ ನಡೆಯಲಿದೆ. ಈ ನಾಗಮಂಡಲೋತ್ಸವದಲ್ಲಿ ರಾಸಾಯನಿಕ ಬಣ್ಣಗಳ ಬದಲಾಗಿ ಅಕ್ಕಿಹುಡಿ, ಅರಶಿನ ಹುಡಿ,ಸುಣ್ಣಮಿಶ್ರಿತ ಕೆಂಪು ಬಣ್ಣ, ಎಲೆಗಳನ್ನು ಹುಡಿ ಮಾಡಿದ ಹಸಿರು ಬಣ್ಣ, ಸುಟ್ಟ ಭತ್ತದ ಹೊಟ್ಟಿನ ಕಪ್ಪು ಬಣ್ಣ ಹೀಗೆ ರಾಸಾಯನಿಕ ರಹಿತ ಪಂಚ ಬಣ್ಣಗಳಿಂದ ನಾಗ ಮಂಡಲ ಬಿಡಿಸಲಾಗುವುದು ಎಂದರು.
ಇದಲ್ಲದೇ ಸಾಂಪ್ರದಾಯಿಕ ನಾಗ ಮಂಡಲೋತ್ಸವದಲ್ಲಿ ಗೌಜಿ ಗದ್ದವಿಲ್ಲದ ಪಂಚ ವಾದ್ಯಗಳ ಮೃದುವಾದ ಸ್ವರಗಳಿಂದ ಸಂಗೀತ ಸೇವೆ ನಡೆಯಲಿದ್ದು, ಇದರಿಂದ ಯಾವುದೇ ಪ್ರಾಣಿ ಅಥವಾ ಪಕ್ಷಗಳಿಗೂ ತೊಂದರೆಯಾಗದAತೆ ನಡೆಸುವುದು ಪ್ರಮುಖ ಉದ್ದೇಶವಾಗಿದೆ ಎಂದರು. ಪ್ರಮುಖವಾಗಿ ಪರಿಸರಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಹಾಗೂ ಸಾಕಷ್ಟು ಅರಣ್ಯ ಬೆಳೆಸುವ ನಿಟ್ಟಿನಲ್ಲಿ ನಾಗಮಂಡಲೋತ್ಸವದ ಸಂದರ್ಭದಲ್ಲಿ ಸುಬ್ರಹ್ಮಣ್ಯ ದೇವರ ಮೃತ್ತಿಕೆಯ ಮಣ್ಣಿನಿಂದ ತಯಾರಿಸಲಾದ 5 ಸಾವಿರ ಬೀಜದುಂಡೆಗಳನ್ನು ವಿತರಿಸುವ ಸಂಕಲ್ಪ ಮಾಡಲಾಗಿದೆ ಎಂದು ರಾಮಕೃಷ್ಣ ಆಚಾರ್ಯ ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಚಿಂತಕ ಶ್ರೀಕಾಂತ್ ಶೆಟ್ಟಿ ಮಾತನಾಡಿ, ರೈತರು ಈ ನಾಡಿನ ಆಸ್ತಿ, ದೇಶಕ್ಕೆ ಅನ್ನನೀಡುವ ಅನ್ನದಾತನನ್ನು ಗೌರವಿಸಬೇಕು ಎನ್ನುವ ನಿಟ್ಟಿನಲ್ಲಿ ರಾಮಕೃಷ್ಣ ಆಚಾರ್ಯರು ನಾಗಮಮಂಡಲೋತ್ಸವ ಪುಣ್ಯ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತ ರೈತ ಮೂಡಬಿದಿರೆಯ ಬಿ.ಕೆ ದೇವರಾಯ ಮಿತ್ತಬಾಗಿಲು ಅವರಿಗೆ ರೈತಪೀಠ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು. ಸಾಧಕ ರೈತರನ್ನು ಗುರುತಿಸುವ ಕೆಲಸ ನಾಗಮಂಡಲೋತ್ಸವದಿAದ ಆರಂಭವಾಗಲಿದ್ದು, ಮುಂದಿನ ವರ್ಷದಿಂದ ಪ್ರತೀವರ್ಷ ಸಾಧಕ ರೈತರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ರಕ್ಷತ್ ಆಚಾರ್ಯ ಉಪಸ್ಥಿತರಿದ್ದರು.

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *