
ಕಾರ್ಕಳ, ನ.17: ಮುಂದಿನ ಕೆಲವೇ ದಿನಗಳಲ್ಲಿ ಕಾರ್ಕಳದ ಪಡುತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನದ ದೀಪೋತ್ಸವವು ನಡೆಯಲಿದೆ.ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತಾದಿಗಳು ಆಗಮಿಸಲಿದ್ದು, ಮುಖ್ಯ ರಸ್ತೆಯಲ್ಲಿ ದೇವರ ಉತ್ಸವವೂ ನಡೆಯಲಿದೆ. ಆದರೆ ನಗರ ಪ್ರದೇಶ ಪ್ರಮುಖ ರಸ್ತೆಗಳು ಹೊಂಡ ಗುಂಡಿಗಳಿಂದ ಕೂಡಿದ್ದು ಇದರಿಂದ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಪುರಸಭಾ ವ್ಯಾಪ್ತಿಯ ಪ್ರಮುಖ ರಸ್ತೆಗಳಿಗೆ ಮರು ಡಾಮರೀಕರಣ ನಡೆಸುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಪುರಸಭಾ ಸದಸ್ಯರಾದ ಸುಭೀತ್ ಕುಮಾರ್, ಪ್ರತಿಮಾ ರಾಣೆ, ವಿವೇಕಾನಂದ ಶೆಣೈ, ಸೀತಾರಾಮ ಹಾಗೂ ಸ್ಥಳೀಯರಾದ ಹೇಮಂತ್, ಶಿವಾಜಿ ರಾವ್, ರೀನಾ ಹಾಗೂ ಫಿಲಿಪ್ ಉಪಸ್ಥಿತರಿದ್ದರು





.
.
.
.
.
.
.
.
.
.
.
.
.
.
.
.
.
.
.
.
