
ಕಾರ್ಕಳ, ಮಾ. 12: ಕಾರ್ಕಳ ತಾಲೂಕು ಕಚೇರಿಯ ಅಭಿಲೇಖಾಲಯದಲ್ಲಿನ ಕಡತ ನಾಪತ್ತೆಯಾದ ಪ್ರಕರಣದ ಕುರಿತು ರೆಕಾರ್ಡ್ ರೂಮ್ ಸಿಬ್ಬಂದಿ ಶ್ರೀನಾಥ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಎರ್ಲಪಾಡಿ ಗ್ರಾಮದ MR 03/10-11ರ ಕಡತ ನಾಪತ್ತೆಯಾಗಿದೆ ಎಂದು ಉಪ ತಹಶಿಲ್ದಾರ್ ಹರಿಪ್ರಸಾದ್ ಭಟ್ ದೂರು ನೀಡಿದ್ದಾರೆ.ಕಳೆದ 2022-23 ರಲ್ಲಿ ಈ ಕಡತದ ಪ್ರತಿಯನ್ನು ಅರ್ಜಿದಾರರಿಗೆ ಮಾಹಿತಿ ಹಕ್ಕಿನಡಿ ಒದಗಿಸಲಾಗಿತ್ತು. ಇದೇ ಕಡತದ ದಾಖಲೆಗಳನ್ನು ಮಾಹಿತಿ ಹಕ್ಕು ಮೂಲಕ ಅರ್ಜಿದಾರರು ಮತ್ತೆ ಅರ್ಜಿ ಸಲ್ಲಿಸಿದಾಗ ಕಡತ ಲಭ್ಯವಿಲ್ಲ ಎಂದು ಶ್ರೀನಾಥ್ ಅವರು ಹಿಂಬರಹ ನೀಡಿದ್ದರು ಎಂದು ಆರೋಪಿಸಲಾಗಿದೆ. ಆದ್ದರಿಂದ ಕಡತ ನಾಪತ್ತೆಯಾಗಿರುವ ಕುರಿತು ಶ್ರೀನಾಥ್ ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪದ ಮೇರೆಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


.
.
.
.
.
.
.
.
.
.
