
ಹೆಬ್ರಿ,ಮಾ.17: ಕೋಳಿ ಅಂಕ ನಡೆಯುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿಬೆದರಿಕೆ ಹಾಕಿರುವ ಪ್ರಕರಣ ಬ್ರಹ್ಮಾವರದ ನಾಲ್ಕೂರು ಗ್ರಾಮದಲ್ಲಿ ನಡೆದಿದೆ.
ನಾಲ್ಕೂರಿನ ವಿಠಲ ಪರವ ಅವರು ಮಾ.16 ರಂದು ಬೆಳಿಗ್ಗೆ 10.45ರ ವೇಳೆಗೆ ಮುದ್ದೂರಿಗೆ ಹೋಗುತ್ತಿದ್ದ ವೇಳೆ ಕೆಂಜೂರು ಜಯಕರ ಶೆಟ್ಟಿ ಎಂಬವರು ಪಾದೆಮಠದಲ್ಲಿ ಕೋಳಿ ಅಂಕದ ಬಗ್ಗೆ ವಿಠಲ ಪರವ ಪೊಲೀಸರಿಗೆ ಮಾಹಿತಿ ನೀಡಿ ದಾಳಿ ನಡೆಸಿದ್ದಾರೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ಕಾಲಿನಲ್ಲಿ ತುಳಿದು, ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ವಿಠಲ ಪರವ ದೂರು ನೀಡಿದ್ದು, ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














.
.
.
.
.
.
.
.
.
.
