
ಕಾರ್ಕಳ,ಏ.01: ಕಾರ್ಕಳ -ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘ ಇವರ ವತಿಯಿಂದ 396ನೇ ಛತ್ರಪತಿ ಶಿವಾಜಿ ಜಯಂತಿ ಹಾಗೂ ಮರಾಠಿ ಕ್ರೀಡಾ ಸಂಭ್ರಮ- 2026, ತುಳಜಾ ಭವಾನಿ ಟ್ರೋಫಿ ಏಪ್ರಿಲ್ 5 ಭಾನುವಾರ ಕಾರ್ಕಳ ಸ್ವರಾಜ್ ಮೈದಾನದಲ್ಲಿ ನಡೆಯಲಿದೆ.
ಉಡುಪಿ-ದಕ್ಷಿಣ ಕನ್ನಡ -ಕಾಸರಗೋಡು ಜಿಲ್ಲಾಮಟ್ಟದ ಪುರುಷರ ಕ್ರಿಕೆಟ್ ಪಂದ್ಯಾಟ, ಮಹಿಳೆಯರ ತ್ರೋಬಾಲ್ ಪಂದ್ಯಾಟ, ಕಾರ್ಕಳ- ಹಿಬ್ರಿ ತಾಲೂಕು ಪುರುಷರ ಮತ್ತು ಮಹಿಳೆಯರ ಹಗ್ಗ ಜಗ್ಗಾಟ, ಮತ್ತು ಪುರುಷರ ವಾಲಿಬಾಲ್ ಪಂದ್ಯಾಟ ಹಾಗೂ ವಾರ್ಷಿಕ ಅಥ್ಲೆಟಿಕ್ ಕ್ರೀಡಾಕೂಟ- 2026 ನಡೆಯಲಿದೆ.
ಸಮಾಜದ ಎಲ್ ಕೆಜಿ ಯುಕೆಜಿ ಮಕ್ಕಳಿಂದ ಹಿಡಿದು 50 ವರ್ಷ ಮೇಲ್ಪಟ್ಟ ಸಮಾಜ ಬಾಂಧವರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8618495034 ಮತ್ತು 9845606387 ಅನ್ನು ಸಂಪರ್ಕಿಸಬಹುದು.















.
.
.
.
.
.
.
.
.
.
