
ಹೆಬ್ರಿ,ಏ.11; ರಸ್ತೆ ದಾಟಲು ಮುಂದಾದ ಇಬ್ಬರು ವಿದ್ಯಾರ್ಥಿನಿಯರಿಗೆ ರಾಂಗ್ ಸೈಡ್ ನಿಂದ ಬಂದ ಗೂಡ್ಸ್ ವಾಹನ ಡಿಕ್ಕಿಯಾಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಏ.10 ರಂದು ಉಡುಪಿ ಕಡೆಯಿಂದ ಬಸ್ಸಿನಲ್ಲಿ ಬಂದು ಹೆಬ್ರಿ ಕಡೆಗೆ ಹೋಗುವ ರಸ್ತೆಯಲ್ಲಿ ಶಾಲೆಗೆ ಹೋಗುವುದಕ್ಕಾಗಿ ಇಳಿದು ರಸ್ತೆ ದಾಟಲೆಂದು ಶಾಲಾ ವಿಧ್ಯಾರ್ಥಿ ಅರ್ಪಣಾ ಹಾಗೂ ಆಕೆಯ ಸಂಬAಧಿ ಪ್ರೀತಿ ರಸ್ತೆಗೆ ಇಳಿಯುತ್ತಿದ್ದಂತೆ ಉಡುಪಿ ಕಡೆಯಿಂದ ರಾಂಗ್ ಸೈಡ್‌ನಲ್ಲಿ ಬಂದ ಗೂಡ್ಸ್ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲದ ಕೆಎಂಸಿ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















.
.
.
.
.
.
.
.
.
.
