
ಮೈಸೂರು, ಏ.23: ಕರ್ನಾಟಕ ರಾಜ್ಯ ಲ್ಯಾಂಪ್ಸ್ ಮಹಾ ಮಂಡಳದ ನೂತನ ಅಧ್ಯಕ್ಷರಾಗಿ ಅರುಣ್ ಕುಮಾರ್ ಅವರು ಆಯ್ಕೆಯಾಗಿದ್ದಾರೆ. ಏ.23ರಂದು ಗುರುವಾರ ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಲ್ಯಾಂಪ್ಸ್ ಮಹಾ ಮಂಡಳದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಹಾ ಮಂಡಳದ 12 ಜನರ ನಿರ್ದೇಶಕರಲ್ಲಿ ಅರುಣ್ ಕುಮಾರ್ ಅವರು 9 ಮತಗಳನ್ನು ಪಡೆದು ತನ್ನ ಪ್ರತಿಸ್ಪರ್ಧಿ ಬಂಡಾಯ ಅಭ್ಯರ್ಥಿ ಮುದ್ರಾಡಿ ರಾಘವ ನಾಯಕ್ ವಿರುದ್ಧ ಭರ್ಜರಿ ಜಯಗಳಿಸಿದ್ದಾರೆ. ರಾಘವ ನಾಯ್ಕ್ ಕೇವಲ 3 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿದ್ಧಮರಿ ಗೌಡ ಅವರು ತನ್ನ ಎದುರಾಳಿ ಸುಬ್ರಹ್ಮಣ್ಯ ವಿರುದ್ಧ 9 ಮತಗಳನ್ನು ಗಳಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿ ಜಿ.ಸಿ ಜ್ಯೋತಿ ಅರಸ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.


.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
