
ಬೆಂಗಳೂರು,ಏ. 29:ಕಳೆದ 2022ರಲ್ಲಿ ಮಂಗಳೂರಿನ ಕಂಕನಾಡಿ ಎಂಬಲ್ಲಿ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರದ ಅಪರಾಧಿ ಉಗ್ರ ಮೊಹಮ್ಮದ್ ಶಾರಿಖ್ಗೆ ವಿಧಿಸಲಾದ 10 ವರ್ಷ ಕಠಿಣ ಶಿಕ್ಷೆಯ ಪ್ರಮಾಣವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು NIA ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಆತ ಎಸಗಿರುವ ದುಷ್ಕೃತ್ಯಕ್ಕೆ 10 ವರ್ಷ ಶಿಕ್ಷೆ ತುಂಬಾ ಕಡಿಮೆ, ಈಗ 27 ವರ್ಷದ ಶಾರೀಕ್ ಈಗಾಗಲೇ 3 ವರ್ಷ ಜೈಲಿನಲ್ಲಿ ಕಳೆದಿದ್ದಾನೆ. ಇನ್ನೂ 7 ವರ್ಷ ಮಾತ್ರ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.ಮುಂದಿನ 7 ವರ್ಷದಲ್ಲಿ ಆತನಿಗೆ 34 ವರ್ಷ ಆಗಲಿದೆ. ಮಧ್ಯಮ ವಯಸ್ಕನಾಗಿ ಹೊರಗೆ ಬಂದರೆ ಆತ ಮತ್ತೆ ಭಯೋತ್ಪಾದಕ ಕೃತ್ಯದಲ್ಲಿ ಭಾಗಿ ಆಗುವ ಸಾಧ್ಯತೆ ಇದೆ. ಮನ ಪರಿವರ್ತನೆ ಸಾಧ್ಯತೆ ತೀರಾ ಕಡಿಮೆ ಎಂದು NIA ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇದೇ ಕಾರಣಕ್ಕೆ ಕನಿಷ್ಟ 20 ರಿಂದ 30 ವರ್ಷ ಜೈಲಿನಲ್ಲಿ ಆತನನ್ನು ಇರಿಸಲು NIA ತೀರ್ಮಾನಿಸಿದೆ.
ಈಗಾಗಲೇ ಉಗ್ರ ಶಾರಿಖ್ಗೆ ಸೆಕ್ಷನ್ 121 ಎ, ಸೆಕ್ಷನ್ 122, ಸೆಕ್ಷನ್ 326 ಹಾಗೂ ಯುಎಪಿಎ ಸೇರಿದಂತೆ ಹಲವು ಸೆಕ್ಷನ್ಗಳ ಅಡಿಯಲ್ಲಿ ಕೋರ್ಟ್ 10 ವರ್ಷ ಕಠಿಣ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ಎನ್ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಆದರೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಈ ಶಿಕ್ಷೆ ಕಡಿಮೆ ಎಂದು NIA ವಾದವಾಗಿದೆ.


.
.
.
.
.
.
.
.
.
.
.
.
.
.
.
.
.
.
.
.
