
ನವದೆಹಲಿ, ಮೇ.02: ಇಂದು (ಶನಿವಾರ) ನಿಮ್ಮ ಮೊಬೈಲ್ ಫೋನ್‌ಗೆ ಹಠಾತ್ತನೆ ಭೀಕರವಾದ ಸೈರನ್ ಶಬ್ದದ ಮೆಸೇಜ್ ಬರಲಿದೆ. ಈ ಸಂದೇಶ ಬಂದರೆ ನೀವು ಗಾಬರಿಯಾಗಬೇಡಿ. ಯಾಕೆಂದರೆ ಇದು ಕೇಂದ್ರ ಸರ್ಕಾರವು ಡಿಸಾಸ್ಟರ್ ಅಲರ್ಟ್ ಬಗ್ಗೆ ನಡೆಸುತ್ತಿರುವ ಒಂದು ತಾಂತ್ರಿಕ ಪರೀಕ್ಷೆಯಾಗಿದೆ.
ಏನಿದು ಡಿಸಾಸ್ಟರ್ ಅಲರ್ಟ್ ಟೆಸ್ಟ್?
ಪ್ರಾಕೃತಿಕ ವಿಕೋಪಗಳಾದ ಪ್ರವಾಹ, ಭೂಕಂಪ ಅಥವಾ ಸುನಾಮಿ ಮುಂತಾದ ಸಂದರ್ಭಗಳಲ್ಲಿ ಜನರನ್ನು ಮೊದಲೇ ಎಚ್ಚರಿಸಲು ಸರ್ಕಾರ ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಿದೆ. ಇದರ ಭಾಗವಾಗಿಯೇ ಇವತ್ತು ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ದೇಶದಾದ್ಯಂತ ಇರುವ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಈ ಸಂದೇಶ ಬರಲಿದೆ. ನಿಮ್ಮ ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದರೂ ಕೂಡ ಜೋರಾದ ಸೈರನ್ ಶಬ್ದದೊಂದಿಗೆ ಫ್ಲ್ಯಾಶ್ ಮೆಸೇಜ್ ಕಾಣಿಸಿಕೊಳ್ಳುತ್ತದೆ.ಈ ಸಂದೇಶ ಬಂದಾಗ ಗಾಬರಿಯಾಗುವ ಅಗತ್ಯವಿಲ್ಲ. ಸಂದೇಶದ ಕೆಳಗೆ ಇರುವ ಬಟನ್ ಒತ್ತಿದರೆ ಸಾಕು. ಇದು ಕೇವಲ ಟೆಸ್ಟಿಂಗ್ ಆಗಿರುವುದರಿಂದ ನೀವು ಯಾವುದೇ ಸುರಕ್ಷಿತ ಜಾಗಕ್ಕೆ ಓಡುವ ಅವಶ್ಯಕತೆಯಿಲ್ಲ.
ನೈಸರ್ಗಿಕ ವಿಕೋಪಗಳು,ಯುದ್ಧ ಮುಂತಾದ ತುರ್ತು ಸಂದರ್ಭದಲ್ಲಿ ದೇಶದ ಕೋಟ್ಯಂತರ ಜನರಿಗೆ ಏಕಕಾಲದಲ್ಲಿ ನಿಖರವಾದ ಮಾಹಿತಿ ತಲುಪಿಸಲು ಈ ವ್ಯವಸ್ಥೆ ಎಷ್ಟು ಸಜ್ಜಾಗಿದೆ ಎಂಬುದನ್ನು ಪರಿಶೀಲಿಸುವುದು ಇದರ ಮುಖ್ಯ ಉದ್ದೇಶವಾಗಿದೆ.


.
.
.
.
.
.
.
.
.
.
.
.
.
.
.
.
.
.
.
.
