
ನವದೆಹಲಿ,ಮೇ.01:ಪಂಚ ರಾಜ್ಯಗಳ ಚುನಾವಣೆ ಮುಗಿಯವುದನ್ನೇ ಕಾದ ಕೇಂದ್ರ ಸರ್ಕಾರ ಇದೀಗ ಜನ ಸಾಮಾನ್ಯರ ಮೇಲೆ ಅಕ್ಷರಶಃ ಗಧಾಪ್ರಹಾರವನ್ನೇ ಮಾಡಿದೆ. ಇರಾನ್-ಅಮೇರಿಕಾ ಯುದ್ಧವನ್ನೇ ಮುಂದಿಟ್ಟುಕೊAಡು ವಾಣಿಜ್ಯ ಬಳಕೆಯ ಎಲ್‌ಪಿಜಿ (19 ಕೆಜಿ) ಸಿಲಿಂಡರ್ ದರವನ್ನು ಭಾರೀ ಹೆಚ್ಚಳ ಮಾಡಿದೆ.ಈ ಬೆಲೆ ಏರಿಕೆಯಿಂದ ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲಿ ವಾಣಿಜ್ಯ ಸಿಲಿಂಡರ್ ದರ ಬರೋಬ್ಬರಿ 993 ರೂಪಾಯಿ ಹೆಚ್ಚಳವಾಗಲಿದೆ. ಕೇಂದ್ರ ಸರ್ಕಾರದ ಭಾರೀ ಬೆಲೆ ಏರಿಕೆ ನಿರ್ಧಾರದ ವಿರುದ್ಧ ಹೊಟೇಲ್ ಮಾಲೀಕರು,ಕೈಗಾರಿಕೆ ಸಂಸ್ಥೆಗಳು ಸೇರಿದಂತೆ ವಾಣಿಜ್ಯ ಸಿಲಿಂಡರ್ ಬಳಕೆದಾರರು ಕೆಂಡಾಮAಡಲರಾಗಿದ್ದು, ಕೇವಲ ಯುದ್ಧದ ನೆಪ ಮುಂದಿಟ್ಟುಕೊAಡು ಈ ಪರಿಯಾಗಿ ಭಾರೀ ಬೆಲೆ ಹೆಚ್ಚಳ ಮಾಡಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಜನ ಹಿಡಿಶಾಪ ಹಾಕುತ್ತಿದ್ದಾರೆ. ದರ ಏರಿಕೆ ಇಂದು ಮಧ್ಯರಾತ್ರಿಯೇ ಹೆಚ್ಚಳವಾಗಿದ್ದು, ಸಿಲಿಂಡರ್ ದರ ಏರಿಕೆ ಹೊಟೇಲ್ ಮಾಲೀಕರಿಗೆ ಬೆಳ್ಳಂಬೆಳಗ್ಗೆ ಶಾಕ್ ನೀಡಿದೆ.
ಬೆಲೆ ಹೆಚ್ಚಳದಿಂದ ಪ್ರಮುಖ ನಗರಗಳಲ್ಲಿ ಇಂದಿನ ವಾಣಿಜ್ಯ ಸಿಲಿಂಡರ್ ದರಗಳು:
ದೆಹಲಿಯಲ್ಲಿ ರೂ.2078.50 ಇದ್ದ ದರ ಈಗ ರೂ. 3071.50 ಕ್ಕೆ ಏರಿಕೆಯಾಗಿದೆ.
ಮುಂಬೈಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 3024 ತಲುಪಿದೆ.
ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಹೊಸ ದರ 3202 ಆಗಿದೆ.
ಚೆನ್ನೆöÊಯಲ್ಲಿ ಸಿಲಿಂಡರ್ ಬೆಲೆ ರೂ. 3237ಕ್ಕೆ ಏರಿದೆ.
ಬಿಹಾರದ ಪಾಟ್ನಾದಲ್ಲಿ ವಾಣಿಜ್ಯ ಸಿಲಿಂಡರ್ ದರ 3361 ಆಗಿದೆ.
ಬೆಂಗಳೂರಿನಲ್ಲಿ ದರ ಏರಿಕೆಯ ನಂತರ ಇಂದಿನ ದರ 3152 ರೂ ಗೆ ಏರಿಕೆಯಾಗಿದೆ.
ಗ್ಯಾಸ್ ಬೆಲೆ ಹೆಚ್ಚಳವಾದ ಬೆನ್ನಲ್ಲೇ ಒಟಿಪಿ ಇಲ್ಲದೇ ಸಿಲಿಂಡರ್ ಡೆಲಿವರಿ ಮಾಡಲ್ಲ ಎಂದು ಇಂದಿನಿAದ ಹೊಸ ನಿಯಮ ಜಾರಿಯಾಗಿದೆ. ಇದರ ಜೊತೆಗೆ ಡೆಲಿವರಿ ಅಥೆಂಟಿಕೇಶನ್ ಕೋಡ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಮೊಬೈಲ್ ಸಂಖ್ಯೆ ಅಪ್‌ಡೇಟ್ ಇಲ್ಲದಿದ್ದರೆ, ವಿತರಕರು ಸ್ಥಳದಲ್ಲೇ ಆ್ಯಪ್ ಮೂಲಕ ಸಂಖ್ಯೆಯನ್ನು ಅಪ್‌ಡೇಟ್ ಮಾಡಿ ಕೋಡ್ ಜನರೇಟ್ ಮಾಡಲು ಅವಕಾಶವಿದೆ.


.
.
.
.
.
.
.
.
.
.
.
.
.
.
.
.
.
.
.
.
