
ಕಾರ್ಕಳ,ಮೇ.21: ಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ ಹೃದಯಾಘಾತದಿಂದ ವ್ಯಕ್ತಿಗಳಿಬ್ಬರು ಮೃತಪಟ್ಟಿದ್ದಾರೆ.
ಕಾರ್ಕಳ ತಾಲೂಕಿನ ಮಾಳ ನಿವಾಸಿ ಅಂತೋಣಿ(60) ಎಂಬವರು ಮದ್ಯಪಾನದ ಚಟ ಹೊಂದಿದ್ದು, ಕಳೆದ 5 ವರ್ಷಗಳಿಂದ ಚೌಕಿಯ ಬೈಜು ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನAತೆ ಮೇ.20 ರಂದು ಎಂದಿನAತೆ ಬೈಜುರವರ ಮನೆಯಲ್ಲಿ ತಿಂಡಿ ತಿಂದು ತನಗೆ ಬೆನ್ನು ನೋವಿನ ಕಾರಣ ಶೆಡ್‌ನಲ್ಲಿ ವಿಶ್ರಾಂತಿ ಮಾಡುತ್ತೇನೆಂದು ಹೇಳಿ ಹೋಗಿದ್ದರು. ಆದರೆ ಮಧ್ಯಾಹ್ನ ಅವರು ಊಟಕ್ಕೆ ಬಾರದ ಕಾರಣ ಬೈಜುರವರ ತಾಯಿ ಶೆಡ್ ಬಳಿ ಹೋಗಿ ನೋಡಿದಾಗ ಅಂತೋಣಿ ಅವರು ಮಲಗಿದ್ದಲ್ಲಿಯೇ ಮೃತಪಟ್ಟಿದ್ದರು. ಅವರು ಹೃದಯಾಘಾತ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ ತಾಲೂಕಿನ ಚಾರ ಗ್ರಾಮದ ರತ್ನಾಕರ ಶೆಟ್ಟಿ (57) ಎಂಬವರು ಕೃಷಿ ಕೆಲಸ ಮಾಡಿಕೊಂಡಿದ್ದು, ಮೇ.20 ರಂದು ಸಂಜೆ ಮನೆಯಲ್ಲಿದ್ದ ವೇಳೆ ಎದೆನೋವು ಕಾಣಿಸಿಕೊಂಡಿತ್ತು. ಮನೆಯವರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.
ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,



.
.
.
.
.
.
.
.
.
.
.
.
.
.
.
.
.
.
.
.
