
ಬೆಂಗಳೂರು,ಮೇ.22: ಲಾಡ್ಲೆ ಮಶಾಕ್ ದರ್ಗಾ ವಿವಾದದ ಕೇಸ್ಗಳು ಸೇರಿದಂತೆ 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಸಚಿವ ಸಂಪುಟ ತೀರ್ಮಾನಿಸಿದೆ.
ಕಲಬುರಗಿ ಜಿಲ್ಲೆಯ ಆಳಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿನ ರಾಘವಚೈತನ್ಯ ಶಿವಲಿಂಗದ ಮೇಲೆ ಕೆಲ ಬಾಲಾಪರಾಧಿಗಳು ಮಲಮೂತ್ರ ವಿಸರ್ಜನೆ ಮಾಡಿ ಲಿಂಗಕ್ಕೆ ಹೇಸಿಗೆ ಹಚ್ಚಿ ಅಪಮಾನ ಮಾಡಿದ್ದರು. ಇದು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ವಿರುದ್ಧ ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಮಾಡಿ, ಜೇವರ್ಗಿಯ ಆಂದೋಲ ಮಠದ ಸಿದ್ದಲಿಂಗಸ್ವಾಮಿ ನೇತೃತ್ವದಲ್ಲಿ ಲಿಂಗ ಶುದ್ಧೀಕರಣ ಮಾಡಲು ಕಲಬುರಗಿಯ ನಗರದ ವಿಶ್ವಾರಾಧ್ಯ ಗುಡಿಯಿಂದ ಅಳಂದ ಚಲೋ ನಡೆಸಲು ಕರೆ ನೀಡಲಾಗಿತ್ತು.
ಇದಲ್ಲದೇ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧದ 10 ಪ್ರಕರಣಗಳು, ಕಾವೇರಿ ಹೋರಾಟಗಾರರ ವಿರುದ್ಧದ ಪ್ರಕರಣಗಳು, ಕನ್ನಡ ಪರ ಹೋರಾಟ, ಕಳಸಾ-ಬಂಡೂರಿ ಯೋಜನೆ ಹೋರಾಟಕ್ಕೆ ಸಂಬAಧಿಸಿದ ಪ್ರಕರಣಗಳು ಸೇರಿದಂತೆ ರೈತರು ಹಾಗೂ ದಲಿತ ಹೋರಾಟಗಾರರ ವಿರುದ್ಧ ದಾಖಲಾಗಿದ್ದ ಪ್ರಕರಣಗಳೂ ಇವುಗಳಲ್ಲಿ ಸೇರಿವೆ. ಅಲ್ಲದೆ ಆಳಂದದಲ್ಲಿನ ಲಾಡ್ಲೆ ಮಶಾಕ್ ದರ್ಗಾ ವಿವಾದಕ್ಕೆ ಸಂಬAಧಿಸಿದ ಏಳು ಪ್ರಕರಣಗಳನ್ನು ಹಿಂಪಡೆಯಲು ಕೂಡ ಸರ್ಕಾರ ತೀರ್ಮಾನಿಸಿದ್ದು, ಈ ನಿರ್ಧಾರವೀಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ರಾಜ್ಯ ಸರ್ಕಾರದ ನಿರ್ಣಯದ ವಿರುದ್ಧ ಕಿಡಿ ಕಾರಿರುವ ಬಿಜೆಪಿ ಎಂಎಲ್ಸಿ ಸಿ.ಟಿ. ರವಿ, ರಾಜ್ಯ ಸರ್ಕಾರ ಒಂದು ಕಡೆ ಹಿಂದೂ ಕಾರ್ಯಕರ್ತರನ್ನ ಟಾರ್ಗೆಟ್ ಮಾಡಿ ಸುಳ್ಳು ಮೊಕದ್ದಮೆ ದಾಖಲಿಸುವ ಜೊತೆಗೆ ರೌಡಿಶೀಟ್ ತೆರೆದು ಪೊಲೀಸ್ ಇಲಾಖೆಯ ಮೂಲಕ ಕಿರುಕುಳ ಕೊಡುವ ಕೆಲಸ ಮಾಡುತ್ತಿದೆ. ಮತ್ತೊಂದು ಕಡೆ ಮುಸ್ಲಿಮರ ಮೇಲಿನ ಕ್ರಿಮಿನಲ್ ಕೇಸ್ ವಾಪಸ್ ಪಡೆಯುವ ಕೆಲಸ ಮಾಡುತ್ತಿದೆ. ಕೆಲವು ಬೆಂಕಿ ಹಚ್ಚಿದ ಪ್ರಕರಣ, ಆಸ್ತಿ-ಪಾಸ್ತಿ ನಷ್ಟ ಮಾಡಿದ ಪ್ರಕರಣ ಸೇರಿದಂತೆ ಗಂಭೀರ ಕೇಸ್ ವಾಪಸ್ ಪಡೆದುಕೊಂಡು ನಾವು ಕ್ರಿಮಿನಲ್ ಪರ ಎಂಬ ಕೆಟ್ಟ ಸಂದೇಶ ಕೂಡಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದ್ದಾರೆ.
ಈ ಸಂಬAಧ ಸಂಬAಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿ,ಕನ್ನಡ ಸಂಘಟನೆಗಳು, ರೈತರ ಮೇಲೆ ಇದ್ದ ಕೇಸ್ ಬಗ್ಗೆ ಕ್ಯಾಬಿನೆಟ್ ಸಬ್ ಕಮಿಟಿಗೆ ರಾಜ್ಯ ಸರ್ಕಾರ ಶಿಫಾರಸು ಮಾಡಿತ್ತು. ಕಾನೂನಾತ್ಮಕವಾಗಿ ಕೇಸ್ ಹಿಂಪಡೆಯಲು ತೀರ್ಮಾನ ಆಗಿದೆ ಎಂದಿದ್ದಾರೆ. ಲಾಡ್ಲೆ ಮಶಾಕ್ ದರ್ಗಾ ವಿವಾದಕ್ಕೆ ಸಂಬAಧಿಸಿದ ಪ್ರಕರಣ ಹಿಂಪಡೆಯುವ ಬಗ್ಗೆಯೂ ಉತ್ತರಿಸಿದ ಅವರು, ಅದರ ಬಗ್ಗೆ ಡಿಟೈಲ್ಸ್ ಹೇಳಲು ಹೋಗಲ್ಲ. ಎಲ್ಲವೂ ಚರ್ಚೆ ಮಾಡಿಯೇ ತೀರ್ಮಾನ ಮಾಡಲಾಗಿದೆ. ಇದು ಏಕಾಏಕಿ ತೀರ್ಮಾನವಲ್ಲ ಎಂದಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
