
ಕಾರ್ಕಳ, ಮೇ.30: ಕಾರ್ಕಳ ತಾಲೂಕಿನ ತೆಳ್ಳಾರು ರಸ್ತೆ ನಿವಾಸಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತೆಳ್ಳಾರಿನ ಯತೀಶ ಆಚಾರ್ಯ(41) ಅವರು ಕಳೆದ 6 ವರ್ಷಗಳಿಂದ ಮದ್ಯವ್ಯಸನಿಯಾಗಿದ್ದು, 10 ವರ್ಷಗಳಿಂದ ಕಿಡ್ನಿ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಅದಕ್ಕೆ ಚಿಕಿತ್ಸೆ ಪಡೆಯುತ್ತಿರುವ ವೇಳೆ ಮದ್ಯ ಸೇವನೆ ಮಾಡಬಾರದಾಗಿ ವೈದ್ಯರು ತಿಳಿಸಿದ್ದರೂ ಮದ್ಯಪಾನ ಮಾಡುತ್ತಿದ್ದರು.
ಮೇ.28 ರಂದು ಸಂಜೆ ಆಟವಾಡಲು ಹೋಗಿದ್ದ ಮಗು ಮನೆಗೆ ವಾಪಾಸಾಗುವ ವೇಳೆಗೆ ಯತೀಶ ಮನೆಯಲ್ಲಿ ನೇಣಿಗೆ ಶರಣಾಗಿದ್ದರು.
ಕೂಡಲೇ ಮನೆಯವರು ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಆ ವೇಳೆಗಾಗಲೇ ಮೃತಪಟ್ಟಿದ್ದರು.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
