
ಕಾರ್ಕಳ,ಜೂ.03: ಕಾರ್ಕಳ ತಾಲೂಕಿನ ಕುಕ್ಕುಂದೂರು ಎಂಬಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಕಲ್ಲು ಸಾಗಾಟಕ್ಕೆ ಬಳಸಿದ್ದ 3 ಟಿಪ್ಪರ್ ಲಾರಿಗಳು, ಕಲ್ಲು ಒಡೆಯಲು ಬಳಸಿದ್ದ ಕಂಪ್ರೆಶರ್ ಸೇರಿದಂತೆ ಗಣಿಗಾರಿಕೆಗೆ ಬಳಸಿದ್ದ ಇತರ ಪರಿಕರಗಳನ್ನು ವಶಪಡಿಸಿಕೊಂಡು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕುಕ್ಕುಂದೂರು ಗ್ರಾಮದ ಅರ್ಬಿಪಾದೆ ಎಂಬಲ್ಲಿ ಸರ್ವೆ ನಂ 281/* ಸರಕಾರಿ ಸ್ಥಳದಲ್ಲಿ ಆರೋಪಿಗಳಾದ ಅರುಣ್ ಕುಮಾರ್ ಶೆಟ್ಟಿ ಕುಕ್ಕುಂದೂರು,ಸದಾಶಿವ ಶೆಟ್ಟಿ ಕುಕ್ಕುಂದೂರು, ಸತೀಶ್ ಕಿಣಿ ಕುಕ್ಕುಂದೂರು ಹಾಗೂ ಇತರರು ಸೇರಿಕೊಂಡು ಯಾವುದೇ ಪರವಾನಗಿ ಇಲ್ಲದೇ ಕಲ್ಲುಬಂಡೆಗಳನ್ನು ಒಡೆದು ಶಿಲೆಕಲ್ಲುಗಳನ್ನಾಗಿ ಪರಿವರ್ತಿಸಿ ಅಕ್ರಮ ಸಾಗಾಟ ಮಾಡುತ್ತಿರುವುದಾಗಿ ಕಾರ್ಕಳ ನಗರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಮುರಳೀಧರ ನಾಯ್ಕ್ ರವರಿಗೆ ಮೇಲಧಿಕಾರಿಯವರು ನೀಡಿದ ಮಾಹಿತಿ ಮೇರೆಗೆ ಜೂ.02 ರಂದು ದಾಳಿ ನಡೆಸಿದಾಗ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ಕಲ್ಲು ಸಾಗಾಟಕ್ಕೆ ಬಳಸಿದ್ದ 3 ಟಿಪ್ಪರ್ ಲಾರಿ, ಅದರಲ್ಲಿ ತುಂಬಿಸಿರುವ ಶಿಲೆ ಕಲ್ಲುಗಳು, ಕಲ್ಲು ಒಡೆಯಲು ಉಪಯೋಗಿಸಿದ ಕಂಪ್ರೆಶರ್ ಸೇರಿದಂತೆ ಇನ್ನಿತರ ಪರಿಕರಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
