
ಕಾರ್ಕಳ, ಜು. 04:ರೋಟರಿ ಕ್ಲಬ್, ಕಾರ್ಕಳ ರಾಕ್ ಸಿಟಿ, ಇದರ 2026-27 ಸಾಲಿನ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮವು ಪೆರ್ವಾಜೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜರುಗಿತು.
ಪದಗ್ರಹಣ ಅಧಿಕಾರಿಯಾಗಿ ರೋಟರಿ ಜಿಲ್ಲೆ 3181 ಇದರ, ವಲಯ 02ರ ಸಹಾಯಕ ಗವರ್ನರ್ ಸಂದೀಪ್ ರಾವ್ ಇಡ್ಯ ಇವರು ಉಪಸ್ಥಿತರಿದ್ದು, ಸಹಾಯಕ ಗವರ್ನರ್ ಸುರೇಶ್ ನಾಯಕ್ ,ವಲಯ ಸೇನಾನಿ ಕೃಷ್ಣ ಪ್ರಸಾದ್,ನಿಕಟ ಪೂರ್ವ ಸಹಾಯಕ ಗವರ್ನರ್ ವಿಘ್ನೇಶ್ ಶಣೈ, ನಿಕಟಪೂರ್ವ ವಲಯ ಸೇನಾನಿ ಪ್ರಶಾಂತ್ ಬೆಳಿರಾಯ, ಕ್ಲಬ್ ನ ಮಾರ್ಗ ದರ್ಶಕರಾದ ಭರತೇಶ ಆದಿರಾಜ್ ಇವರ ಸಮಕ್ಷಮದಲ್ಲಿ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷ ಸುರೇಂದ್ರ ನಾಯಕ್ ರವರಿಂದ ನೂತನ ಅಧ್ಯಕ್ಷ ಮಂಜುನಾಥ್ ಹೆಗ್ಡೆಯವರಿಗೆ ಪ್ರಭಾರ ವಹಿಸಿದರು.
ನಿಕಟಪೂರ್ವ ಅಧ್ಯಕ್ಷ ಸುರೇಂದ್ರ ನಾಯಕ್ ರವರು ಮುಖ್ಯ ಅತಿಥಿಗಳನ್ನು ಸ್ವಾಗತಿಸಿ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ನಿಕಟಪೂರ್ವ ಕಾರ್ಯದರ್ಶಿ ರಾಘವೇಂದ್ರ ಕಾಮತ್ ಕ್ಲಬ್ ನ ವರದಿ ವಾಚಿಸಿದರು.
ನೂತನ ರೋಟರಿ ಅಧ್ಯಕ್ಷರು ತಮ್ಮ ಕಾರ್ಯಕಾರಿ ಸಮಿತಿಯನ್ನು ಸಭೆಗೆ ಪರಿಚಯಿಸಿ ಸ್ವೀಕಾರ ಭಾಷಣ ಮಾಡಿದರು.
ಪದಗ್ರಹಣ ಅಧಿಕಾರಿ, ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರ ಪರಿಚಯವನ್ನು ಕ್ರಮವಾಗಿ ಚಿರಾಗ್ ರಾವ್,ಮಾಧವಿ ಕೆ ಹಾಗೂ ಸುಜಯ ನೆರವೇರಿಸಿದರು.
ರೋಟರಿ ಕ್ಲಬ್ ನ ಸದಸ್ಯರಾದ ರಾಜೇಶ್ ಕುಂಟಾಡಿ ಇವರ ಪತ್ನಿಯಾದ ವಿದ್ಯಾ ರಾಜೇಶ್ ರವರನ್ನು ,Dr. ವಿನ್ಸಿಟಾ ರವರು ಪರಿಚಯಿಸಿದರು ಹಾಗೂ ವಿದ್ಯಾ ರಾಜೇಶ್ ರವರು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ PhD ಪದವಿ ಪಡೆದಿದ್ದು ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.
Zone 05ರ ನೂತನ ಸಹಾಯಕ ಗವರ್ನರ್ ಸುರೇಶ್ ನಾಯಕ್ ಮತ್ತು ವಲಯ ಸೇನಾನಿ ಕೃಷ್ಣ ಪ್ರಸಾದ್ ರವರನ್ನು ಪ್ರಕಾಶ್ ಪೈ ಹಾಗೂ ಸೋಮಶೇಖರ್ ರವರು ಪರಿಚಯಿಸಿದರು.
ಈ ಸಂದರ್ಭದಲ್ಲಿ ಪಡಿಬೆಟ್ಟು ಅಂಗನವಾಡಿಯ ಮಕ್ಕಳಿಗೆ ಪೀಠೋಪಕರಣಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಲಾಯಿತು.
ವಿವಿಧ ರೋಟರಿ ಕ್ಲಬ್ ಗಳಿಂದ ಆಗಮಿಸಿದ್ದ
ಮತ್ತು ವಿಶೇಷ ಆಹ್ವಾನಿತರನ್ನು ಉಪೇಂದ್ರ ವಾಗ್ಲೆಯವರು ಗುರುತಿಸಿದರು. ನೂತನ ಕಾರ್ಯದರ್ಶಿ ಗಣೇಶ್ ಬರ್ಲಾಯ ಧನ್ಯವಾದಗಳನ್ನಿತ್ತರು.
ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.



.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
