
ಕಾರ್ಕಳ, ಜು.04: ಪಾಠದ ಜೊತೆ ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ಬಂದಾಗ ಸಾಮಾಜಿಕ ಕಳಕಳಿ, ಅನುಕಂಪ, ಜವಾಬ್ದಾರಿ, ನೈತಿಕತೆ ಹೆಚ್ಚುತ್ತದೆ. ಇಂದಿನ ಸನ್ನಿವೇಶದಲ್ಲಿ ಯಕ್ಷಗಾನ ಬಹಳ ಮುಖ್ಯ ಸಂಸ್ಕಾರದ ಕಲೆ. ಪ್ರಾಥಮಿಕ ಹಂತದಲ್ಲೇ ಮಕ್ಕಳನ್ನು ಈ ಕಲೆಯತ್ತ ಆಕರ್ಶಿತರಾಗುವಂತೆ ಮಾಡಬೇಕು ಎಂದು ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು.
ಅವರು ಮಿಯ್ಯಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆಂಕುತಿಟ್ಟು ಯಕ್ಷಗಾನ ತರಬೇತಿ ತರಗತಿಯನ್ನು ಉದ್ಘಾಟಸಿ ಮಾತನಾಡಿದರು.
ಶಾಲಾ ಎಸ್.ಡಿ.ಎಂ.ಸಿ ಅದ್ಯಕ್ಷರಾದ ಶ್ರೇಯಸ ಜೈನ್ ಅಧ್ಯಕ್ಷತೆ ವಹಿಸಿ ಶಾಲಾ ಉನ್ನತಿಗೆ ಸಹಕರಿಸಿದ ಎಲ್ಲರನ್ನೂ ಅಭಿನಂದಿಸಿದರು.
ಯಕ್ಷ ಶಿಕ್ಷಕ ಮಹಾವೀರ ಪಾಂಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯಕ್ಷ ಕಲಾರಂಗದ ಉಪಾದ್ಯಕ್ಷ ಬೇಬಿ ಕೆ.ಈಶ್ವರಮಂಗಲ ಮಾತನಾಡಿ, ಪದವಿ ದೊರಕಬಹುದು ಸಂಪತ್ತು ಗಳಿಸಬಹುದು ಆದರೆ ನೆಮ್ಮದಿ ಸಿಗುವುದು ಇಂತಹ ರಂಗ ಕಲೆಗಳಿಂದ ಎಂದು ಸಂದರ್ಭೋಚಿವಾಗಿ ಮಾತಾಡಿದರು.ಕಲಾರಂಗ ಹಾಗೂ ಫೌಂಡೇಶನ್ ನ ಕಾರ್ಕಳ ಘಟಕದ ಅದ್ಯಕ್ಷ ವಿಜಯ ಶೆಟ್ಟಿ ಉಪಸ್ಥಿತರಿದ್ದರು.
ಬಜಗೋಳಿಯ ರಜತ್ ರಾವ್ ಮೋಹನ್ ರವರ ಜಾಲಿ ಬಾಯ್ಸ್ ತಂಡದಿAದ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ಹಳೆವಿದ್ಯಾರ್ಥಿ ಗಳಾದ ಹಿರಿಯರು ಮಾಧವ ಕಾಮತ್, ನೆಲ್ಸನ್ ಡಿ.ಸೋಜ, ಪಂ ಮಾಜಿ ಸದಸ್ಯ ಶೇಖ್ ಶಬ್ಬೀರ್ , ಗ್ರಾಮ ಪಂ .ನಿ.ಪೂ.ಅದಕ್ಷೆ ಸನ್ಮತಿ ನಾಯಕ್, ಎಸ್.ಡಿ.ಎಂ.ಸಿ ಉಪಾದ್ಯಕ್ಷೆ ಶ್ರೀಮತಿ ಶಾಂತಿ, ಇಸ್ರೋದ ನಿವೃತ್ತ ವಿಜ್ಞಾನಿ ಕೊಡುಗೈದಾನಿ ಜನಾರ್ಧನ್ ಇಡ್ಯ, ಗ್ರಾಮದ ಪ್ರಧಾನ ಅರ್ಚಕ ಹರಿದಾಸ್ ಭಟ್, ನಿವೃತ್ತ ಶಿಕ್ಷಕ ಸಂಜೀವ ದೇವಾಡಿಗ, ಶಾಲಾಭಿವೃಧ್ದಿ ಮಂಡಳಿ ಅದ್ಯಕ್ಷ ಶ್ಯಾಮ ಶೆಟ್ಟಿ , ಮುಖ್ಯ ಶಿಕ್ಷಕಿ ವನಿತಾ ಹೆಗ್ಡೆ ಉಪಸ್ಥಿತರಿದ್ದರು.
ಸಹಶಿಕ್ಷಕಿ ವಿದ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕ ಮಂಜೇಗೌಡ ಧನ್ಯವಾದವಿತ್ತರು.



.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
