
ಕಾರ್ಕಳ, ಜು.14:ಇತ್ತೀಚಿನ ವರ್ಷಗಳಲ್ಲಿ ಕಾರ್ಕಳ ತಾಲೂಕಿನಾದ್ಯಂತ ವಿವಿಧ ಜಾತಿಯ ಹೊಸ ಹಣ್ಣುಗಳ ಬೇಸಾಯ ಹೆಚ್ಚುತ್ತಿದ್ದು, ಇವುಗಳಲ್ಲಿ ಪ್ರಮುಖವಾಗಿ ರಾಂಬೂಟನ್ ಬೆಳೆಯನ್ನು ಹೆಚ್ಚು ಹೆಚ್ಚು ವಿಸ್ತೀರ್ಣದಲ್ಲಿ ಬೆಳೆಸಲಾಗುತ್ತಿದೆ. ನಮ್ಮ ಪ್ರದೇಶಕ್ಕೆ ಈ ಬೆಳೆ ಹೊಸ ಬೆಳೆ ಆಗಿರುವ ಕಾರಣ ಈ ಬೆಳೆಯ ಬೇಸಾಯ ಕ್ರಮಗಳ ಕುರಿತು ರೈತರಿಗೆ ತಾಂತ್ರಿಕ ಮಾಹಿತಿ ಸಾಕಷ್ಟು ಲಭ್ಯವಿಲ್ಲ. ಈ ನಿಟ್ಟಿನಲ್ಲಿ ರಾಂಬೂಟನ್ ಬೆಳೆಯಲ್ಲಿ ಅಧಿಕ ಇಳುವರಿ ಹಾಗೂ ಮಳೆಗಾಲಕ್ಕೂ ಪೂರ್ವದಲ್ಲಿ ಫಸಲು ತೆಗೆಯಲು ಅವಶ್ಯವಿರುವ ಸವರುವಿಕೆ ತಂತ್ರಜ್ಞಾನ (Pruning Technique) ಕುರಿತು ಹಾಗೂ ತದನಂತರದ ನಿರ್ವಹಣೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ತೋಟಗಾರಿಕೆ ಇಲಾಖೆ, ಕಾರ್ಕಳ, ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ ಹಾಗೂ ಕಾರ್ಕಳ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ, ಕಾರ್ಕಳ ಸಹಭಾಗಿತ್ವದಲ್ಲಿ ಜು. 16 ರಂದು ಬೆಳಿಗ್ಗೆ 10 ಗಂಟೆಗೆ ಮಾಳ ಮಂಜಲತ್ತಾರ್ ಅಶೋಕ್ ಬಲ್ಲಾಳ್ ರವರ ತೋಟದಲ್ಲಿ ಆಯೋಜಿಸಲಾಗಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರದ ತೋಟಗಾರಿಕಾ ತಜ್ಞರಾದ ಡಾ|| ಚೈತನ್ಯ ಅವರು ಭಾಗವಹಿಸಲಿದ್ದಾರೆ.ಈ ತರಬೇತಿ ಕಾರ್ಯಕ್ರಮದಲ್ಲಿ ರಾಂಬೂಟನ್ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಾರ್ಕಳ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
