
ಕಾರ್ಕಳ,ಜು. 15: ಧ.ಗ್ರಾ ಯೋಜನೆ ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರಿಗೆ ತರಬೇತಿ ಕಾರ್ಯಾಗಾರ ಹಿರಿಯಂಗಡಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಸಂದೀಪ್ ಜಿ.ಎಸ್ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯವಿಪತ್ತು ನಿರ್ವಹಣದ ಕೆಲಸದ ಬಗ್ಗೆ ಗೌರವಿಸಿ ಘಟಕಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಇತ್ತೀಚಿಗೆ ಹೆಚ್ಚುತ್ತಿರುವ ಸೈಬರ್ ಕ್ರೈಂ, ಸಂಚಾರಿ ನಿಯಮ ಉಲ್ಲಂಘನೆ ಮಾದಕ ವಸ್ತುವಿನ ಮೇಲಿನ ಅವಲಂಬನೆಯ ಬಗ್ಗೆ ಜಾಗೃತಿ ಮೂಡಿಸುವ ಮಾಹಿತಿ ನೀಡಿದರು.
ತರಬೇತುದಾರರಾಗಿ ಆಗಮಿಸಿದ್ದ ಶಾಂತಿ ಲಾಲ್ ಜಟಿಯ ಇನ್ಸ್ಪೆಕ್ಟರ್ ನಿರ್ವಹಣಾ ಪಡೆ ಮಾತನಾಡಿ, ಇಂದು ಪೇಟೆಗಳಲ್ಲಿ ಯಾವುದೇ ವಿಪತ್ತುಗಳಾದ ಒಬ್ಬರಿಗೆ ಒಬ್ಬರು ಸಹಕಾರ ನೀಡುವ ರೀತಿಯಲ್ಲಿ ಬದುಕುತ್ತಿರುವುದು ಕಡಿಮೆ. ಒಂದೊಂದು ಫ್ಲಾಟಿನ ಒಳಗಡೆ ಜೀವನವನ್ನು ಮಾಡುತ್ತಿರುತ್ತಾರೆ ಆದರೆ ಹಳ್ಳಿಯ ಜನ ಒಬ್ಬರಿಗೊಬ್ಬರು ಸ್ಪಂದನೆ ಕೊಡುವ ರೀತಿಯಲ್ಲಿ ಬದುಕುತ್ತಿದ್ದಾರೆ .ಇಂತಹ ಸಂದರ್ಭಗಳಲ್ಲಿ ನಮ್ಮ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ ಶೌರ್ಯವಿಪತ್ತು ನಿರ್ವಹಣ ತಂಡವು ಅತಿ ಹೆಚ್ಚು ಸಹಕಾರವನ್ನು ನೀಡುತ್ತಿದೆ ಎಂದರು.
ಸುಭಾಸ್ ಸಿಂದೇ ಸಬ್ ಇನ್ಸ್ಪೆಕ್ಟರ್ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಇವರು ವಿಪತ್ತುಗಳು ಆದ ಸಂದರ್ಭದಲ್ಲಿ ಯಾವ ರೀತಿಯಲ್ಲಿ ರಕ್ಷಣೆಗಳನ್ನ ಮಾಡಬೇಕು ಮತ್ತು ತಮ್ಮ ರಕ್ಷಣೆ ಮಾಡಿಕೊಳ್ಳಬೇಕು ಎಂದು ಪ್ರಾತ್ಯಕ್ಷಿತೆ ಮೂಲಕ ಮಾಹಿತಿಯನ್ನು ನೀಡಿದರು.
ಗಿರೀಶ್ ರಾವ್ ಆಡಳಿತ ಮೊಕ್ತೆಸರರು ದುರ್ಗಾಪರಮೇಶ್ವರಿ ದೇವಸ್ಥಾನ ಹಿರಿಯoಗಡಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ವೃಷಭರಾಜು ಕಡಂಬ ಅಧ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾರ್ಕಳ,
ಜೈವಂತ ಪಟಾಗರ್, ಯೋಜನಾಧಿಕಾರಿಯವರು ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮ, ಪ್ರಕಾಶ್ ರಾವ್, ಮಾಜಿ ಪುರಸಭಾ ಸದಸ್ಯರು,
ಗಣೇಶ್ ಜನಜಾಗೃತಿ
ಯೋಜನಾಧಿಕಾರಿಯವರು ಜನಜಾಗೃತಿ ವಿಭಾಗ ಉಡುಪಿ ಪ್ರಾದೇಶಿಕ ಕಚೇರಿ, ಸದಾನಂದ ಸಾಲಿಯಾನ್ ಮಾಸ್ಟರ್ ಶೌರ್ಯಪತ್ತು ನಿರ್ವಹಣಾ ಕಾರ್ಯಕ್ರಮ ಕಾರ್ಕಳ ತಾಲೂಕು,
ಬಾಲಕೃಷ್ಣ ಹಿರಿಂಜಾ ಯೋಜನಾಧಿಕಾರಿಯವರು ಕಾರ್ಕಳ ತಾಲೂಕು ಉಪಸ್ಥಿತರಿದ್ದರು.
ತರಬೇತಿಯಲ್ಲಿ ಸುಮಾರು 80 ಜನ ಸ್ವಯಂಸೇವಕರು ಭಾಗವಹಿಸಿ ತರಬೇತಿ ಪಡೆಕೊಂಡರು. ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ ಹಿರಿಯ ಸ್ವಾಗತಿಸಿ, ಜನಜಾಗೃತಿ ಯೋಜನಾಧಿಕಾರಿ ಗಣೇಶ್ ವಂದಿಸಿದರು.ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ ನಿರೂಪಿಸಿದರು.




.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
