
ಕಾರ್ಕಳ,ಜು.17: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಕಾರ್ಕಳ, ತೋಟಗಾರಿಕೆ ಇಲಾಖೆ, ಕಾರ್ಕಳ ಮತ್ತು ಪ್ರಾದೇಶಿಕ ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ ಇವರ ಸಹಭಾಗಿತ್ವದಲ್ಲಿ ರಾಂಬೂಟನ್ ಬೆಳೆಯಲ್ಲಿ ಸವರುವಿಕೆ ತಂತ್ರಜ್ಞಾನ ಹಾಗೂ ತದನಂತರದ ನಿರ್ವಹಣೆ ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮ ಭಾನುವಾರ ಮಾಳದಲ್ಲಿ ಜರುಗಿತು.
ಜಿಲ್ಲಾ ಪಂಚಾಯತ್ ತೋಟಗಾರಿಕೆ ಜಂಟಿ ನಿರ್ದೇಶಕರಾದ ಕ್ಷಮಾ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೊಸ ಬೆಳೆಗಳಲ್ಲಿ ತಂತ್ರಜ್ಞಾನಗಳ ಹಂಚಿಕೊಳ್ಳುವಿಕೆಗೆ, ಪರಿಕರಗಳ ಲಭ್ಯತೆ ಹಾಗೂ ಉತ್ತಮ
ಮಾರುಕಟ್ಟೆಗಳ ಅನ್ವೇಷಣೆಗೆ ರೈತ ಉತ್ಪಾದಕ ಕಂಪನಿಗಳ ಅಥವಾ ಬೆಳೆಗಾರರ ಸಂಘಗಳ ಅವಶ್ಯಕತೆಯಿದ್ದು ಅಂತಹ ಪ್ರಯತ್ನ ರಾಂಬೂಟನ್ ಬೆಳೆಯಲ್ಲಿ ನಡೆಯಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಾವರ ಪ್ರಾದೇಶಿಕ ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ/ಚೈತನ್ಯ ರೈತರಿಗೆ ರಾಂಬೂಟನ್ ಬೇಸಾಯ ಕುರಿತು ತಾಂತ್ರಿಕ ಮಾಹಿತಿಗಳನ್ನು ಹಾಗೂ ಪ್ರಾಯೋಗಿಕ ತರಬೇತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ, ಕಾರ್ಕಳದ ಅಧ್ಯಕ್ಷರಾದ ಅಶೋಕ್ ಕುಮಾರ್ ಬಲ್ಲಾಳ್ ವಹಿಸಿದ್ದರು.
ಈ ಸಂದರ್ಭದಲ್ಲಿ ಕಾರ್ಕಳ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಉಪಾಧ್ಯಕ್ಷರಾದ ರವಿರಾಜ್ ಉಪಾಧ್ಯಾಯ, ನಿರ್ದೇಶಕರುಗಳಾದ ಕುಲದೀಪಕ್ ಸುವರ್ಣ, ರಘುವೀರ್ ಶೆಣೈ ಮತ್ತು ನಾರಾಯಣ ನಾಯ್ಕ ಉಪಸ್ಥಿತರಿದ್ದರು. ಕಾರ್ಯಕ್ರಮದ ಬ್ಯಾಂಕಿನ ವ್ಯವಸ್ಥಾಪಕರಾದ ಪ್ರೀತಮ್ ಸ್ವಾಗತಿಸಿ, ನಿರೂಪಿಸಿದರು.




.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
