
ಕಾರ್ಕಳ,ಜು.17: ರೋಟರಿ ಕ್ಲಬ್ ನಿಟ್ಟೆ, ವಲಯ–5, ಜಿಲ್ಲೆ–3182 ವತಿಯಿಂದ ಇತ್ತೀಚೆಗೆ ವನಮಹೋತ್ಸವ ಆಚರಣೆಯ ಅಂಗವಾಗಿ ಸ್ಥಳೀಯರಾದ ರಮೇಶ್ ದೇವಾಡಿಗ ಅವರು “ವನಮಹೋತ್ಸವದ ಮಹತ್ವ” ಕುರಿತು ವಿಶೇಷ ಉಪನ್ಯಾಸ ನೀಡಿದರು.
ಅರಣ್ಯ ಸಂಪತ್ತಿನ ಉಳಿವು, ಜೀವ ವೈವಿಧ್ಯದ ಮಹತ್ವ ಹಾಗೂ ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡವನ್ನು ನೆಟ್ಟು ಅದರ ಪೋಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕೆಂಬ ಸಂದೇಶವನ್ನು ನೀಡಿದರು. ಪರಿಸರ ಸಂರಕ್ಷಣೆಯಲ್ಲಿ ಯುವಜನತೆ ಹಾಗೂ ಸಾಮಾಜಿಕ ಸಂಘಟನೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ, ನಿಟ್ಟೆ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವಧಿಯನ್ನು ಸ್ಮರಿಸಿಕೊಂಡ ಅವರು, ಕಾಲೇಜು ಆವರಣದಲ್ಲಿ ನೂರಾರು ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸಿ ಇಂದಿನ ಹಸಿರು ಪರಿಸರ ನಿರ್ಮಾಣಕ್ಕೆ ತಮ್ಮ ಸಹೋದ್ಯೋಗಿಗಳೊಂದಿಗೆ ನೀಡಿದ ಕೊಡುಗೆ ಬಗೆಗೆ ಹಂಚಿಕೊಂಡರು. ಅಂದು ನೆಟ್ಟ ಗಿಡಗಳು ಇಂದು ಬೃಹತ್ ಮರಗಳಾಗಿ ಬೆಳೆದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನೆರಳು ಮತ್ತು ಶುದ್ಧ ಪರಿಸರವನ್ನು ಒದಗಿಸುತ್ತಿರುವುದನ್ನು ಸಂತೋಷದಿಂದ ನೆನಪಿಸಿಕೊಂಡರು. ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ನಿರಂತರವಾಗಿ ತೊಡಗಿಸಿಕೊಳ್ಳುವಂತೆ ಅವರು ಕರೆ ನೀಡಿದರು.ಉಪನ್ಯಾಸದ ನಂತರ, ಸದಸ್ಯರು ನಿಟ್ಟೆ ಕಾಲೇಜು ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ನಡೆಸಿದರು. ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಅವುಗಳ ಸಂರಕ್ಷಣೆ ಹಾಗೂ ನಿರ್ವಹಣೆಯ ಸಂಕಲ್ಪವನ್ನು ಕೈಗೊಂಡರು. ಈ ಕಾರ್ಯಕ್ರಮವು ಪರಿಸರ ಜಾಗೃತಿ ಮೂಡಿಸುವುದರ ಜೊತೆಗೆ ಹಸಿರು ಪರಿಸರ ನಿರ್ಮಾಣಕ್ಕೆ ರೋಟರಿ ಕ್ಲಬ್ ನಿಟ್ಟೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.




.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
