
ಅಜೆಕಾರು,ಜು.23: ಶ್ರೀ ಮಹಾಗಣಪತಿ ದೇವಸ್ಥಾನ ಪದ್ಮ ನಗರ ಅಜೆಕಾರು ಮತ್ತು ಅಜೆಕಾರು ಪದ್ಮ ಗೋಪಾಲ್ ಎಜುಕೇಶನ್ ಟ್ರಸ್ಟ್ ನಿಂದ ದೇಶಪ್ರೇಮದ ಚಿಂತನೆಯೊAದಿಗೆ, ದೇಶ ಸುಧಾ ಎರಡನೇ ಸಂಚಿಕೆ ಹಾಗೂ ಕಾರ್ಗಿಲ್ ವಿಜಯ ದಿವಸದ ಸಂಭ್ರಮಾಚರಣೆಯನ್ನು ಪದ್ಮ ಗೋಪಾಲ್ ಸಭಾಂಗಣ ಪದ್ಮನಗರ ಅಜೆಕಾರು ಇಲ್ಲಿ ಜುಲೈ 26ರಂದು ಸಂಜೆ 6.30ಕ್ಕೆ ಆಯೋಜಿಸಲಾಗಿದೆ.
ಖ್ಯಾತ ವಾಗ್ಮಿ ಹಾಗೂ ಅಂಕಣಕಾರರಾದ ಮಂಜುನಾಥ ಮಜುನಗೊಂಡ ವಿಜಯಪುರ ಇವರು ಹೃದಯದಲ್ಲಿ ದೇಶಪ್ರೇಮ ,ಉಸಿರಿನಲ್ಲಿ ಭಾರತ ಸ್ವರಾಜ್ಯ- ಛತ್ರಪತಿ ಶಿವಾಜಿ ಮಹಾರಾಜ್ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿರುವರು. ಈ ದೇಶಸುಧಾಸಂಚಿಕೆ -2, ಹಾಗೂ ಕಾರ್ಗಿಲ್ ವಿಜಯ ದಿವಸದ ಸಂಭ್ರಮಾಚರಣೆಗೆ ಸರ್ವ ದೇಶಪ್ರೇಮಿಗಳು ಆಗಮಿಸುವಂತೆ ಅಜೆಕಾರು ಶ್ರೀ ಮಹಾಗಣಪತಿ ದೇವಸ್ಥಾನ ಪದ್ಮ ನಗರ ಅಜೆಕಾರು ಹಾಗೂ ಅಧ್ಯಕ್ಷರು ಮತ್ತು ಟ್ರಸ್ಟಿಗಳು ಅಜೆಕಾರು ಪದ್ಮ ಗೋಪಾಲ್ ಎಜುಕೇಶನ್ ಟ್ರಸ್ಟ್ ಮತ್ತು ಜ್ಞಾನ ಸುಧಾ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸರ್ವ ನಿರ್ದೇಶಕರು ಈ ಮೂಲಕ ತಿಳಿಸಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
