
ಕಾರ್ಕಳ, ಜು.25: ಕಳೆದ ಕೆಲವು ದಿನಗಳ ಹಿಂದಷ್ಟೇ ಅಜೆಕಾರಿನ ರತ್ನಾಕರ ಅಮೀನ್ ಎಂಬವರ ಬ್ಯಾಂಕ್ ಖಾತೆಯಿಂದ ಆನ್ಲೈನ್ ವಂಚಕರು 6.80 ಲಕ್ಷ ರೂ ಹಣ ದೋಚಿದ ಬೆನ್ನಲ್ಲೇ ಇದೀಗ ಇಂತಹ ಮತ್ತೊಂದು ಬ್ಯಾಂಕಿಂಗ್ ವಂಚನೆ ಪ್ರಕರಣ ಬಯಲಾಗಿದೆ. ಅಜೆಕಾರಿನ ನಿವೃತ್ತ ಉದ್ಯೋಗಿಯೊಬ್ಬರಿಗೆ ಫೇಸ್ ಬುಕ್ ಮೂಲಕ ನಿವೃತ್ತಿ ಪೆನ್ಶನ್ ಕಾರ್ಡ್ ಕೊಡಿಸುವುದಾಗಿ ನಂಬಿಸಿ ಲಿಂಕ್ ಕಳುಹಿಸಿ ಬಳಿಕ ಎಟಿಎಂ ಕಾರ್ಡ್ ಹಾಗೂ ಪಿನ್ ನಂಬ್ರ ಪಡೆದು ಬರೋಬ್ಬರಿ 3.73 ಲಕ್ಷ ರೂ ವಂಚಿಸಿದ ಪ್ರಕರಣ ಅಜೆಕಾರಿನ ಮರ್ಣೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮರ್ಣೆ ಗ್ರಾಮದ ಶಂಕರ ಹೆಗ್ಡೆ(66) ಎಂಬವರು ವಂಚನೆಗೊಳಗಾದ ನಿವೃತ್ತ ಉದ್ಯೋಗಿಯಾಗಿದ್ದು, ಆನ್ಲೈನ್ ಬ್ಯಾಂಕಿಂಗ್ ವಂಚನೆಯಿಂದ 3.73 ಲಕ್ಷ ಕಳೆದುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರ ಹೆಗ್ಡೆಯವರ ಫೇಸ್ ಬುಕ್ ಖಾತೆಗೆ ಕೆನರಾ ರಿಟೈರ್ಡ್ ಪೆನ್ಸನ್ ಕಾರ್ಡ್ ಎಂಬ ಖಾತೆಯಿಂದ ವಂಚಕರು ಲಿಂಕನ್ನು ಕಳುಹಿಸಿದ್ದರು. ಈ ಲಿಂಕನ್ನು ತೆರೆದು ಅದರಲ್ಲಿ ರಿಟೈರ್ಡ್ ಪೆನ್ಶನ್ ಕಾರ್ಡ್ ಬಗ್ಗೆ ಪ್ರಯಿಕ್ರಿಯಿಸಿದಾಗ ಕೊಟ್ಟಿದ್ದು, ಅವರಿಗೆ 6744250286, 8655389531, 6744250286 ನಂಬರಿನಿAದ ಕರೆ ಮಾಡಿದ ವಂಚಕ ತಾನು ಬ್ಯಾಂಕಿನ ಸಹಾಯಕ ಮುಖ್ಯ ಪ್ರಬಂಧಕ ಎಂದು ಪರಿಚಯಿಸಿ ನಿಮ್ಮ ಅರ್ಜಿಯನ್ನು ಸ್ವೀಕರಿಸಲಾಗಿದೆ ಎಂದು ಹೇಳಿ ರಿಟೈರ್ಡ್ ಪೆನ್ಸನ್ ಕಾರ್ಡ್ ನ ಲಾಭದ ಬಗ್ಗೆ ಮಾಹಿತಿ ನೀಡಿ ಶಂಕರ ಹೆಗ್ಡೆಯವರ ಡೆಬಿಟ್ ಕಾರ್ಡ್ ನಂಬ್ರ, ಪಿನ್ ನಂಬ್ರ ಹಾಗೂ ಇತರ ವೈಯುಕ್ತಿಕ ಮಾಹಿತಿಯನ್ನು ಪಡೆದು,ಅವರ ಬ್ಯಾಂಕ್ ಖಾತೆಯಿಂದ ರೂ 1.24 ಲಕ್ಷ ಮತ್ತು ಕ್ರೆಡಿಟ್ ಕಾರ್ಡ್ ನಿಂದ ರೂ 2.49 ಲಕ್ಷ ರೂ ಸೇರಿ ಒಟ್ಟು ರೂ 3.73 ಲಕ್ಷ ರೂಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ಸುಲಭವಾಗಿ ಯಾಮಾರಿಸಿದ್ದಾನೆ.
ಈ ಕುರಿತು ಶಂಕರ ಹೆಗ್ಡೆ ಅಜೆಕಾರು ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
