

ಕಾರ್ಕಳ,ಅ.23: ಕಾರ್ಕಳದ ಮಾಳ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 76ನೇ ವರ್ಷದ ಶಾರದಾ ಪೂಜೆಯನ್ನು ಶಾಲೆಯ ಮಾತೃಛಾಯ ಸರಸ್ವತಿ ಮಂದಿರದಲ್ಲಿ ನಡೆಸಲಾಯಿತು. ಅರ್ಚಕರಾದ ಅನಂತಪದ್ಮನಾಭ ಗೋರೆ ಇವರ ನೇತೃತ್ವದಲ್ಲಿ ಪೂಜೆಯನ್ನು ಮಾಡಲಾಯಿತು. ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ಕುಣಿತ ಭಜನೆ ಹಾಗೂ ಭಗವದ್ಗೀತೆ ಶ್ಲೋಕ ಪಠಣ ನಡೆಯಿತು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ, ಸದಸ್ಯರು ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ಭಾಗವಹಿಸಿ ಯಶಸ್ವಿಯಾಗಿ ಶಾರದಾ ಪೂಜೆಯನ್ನು ನಡೆಸಿಕೊಟ್ಟರು. ಶಿಕ್ಷಕಿ ಪ್ರತೀಕ್ಷಾ.ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ, ವಂದಿಸಿದರು.






.
.
.
.
.
.
.
.
.
.
.
.
.
.
.
.
.
.
.
.
