
ನವದೆಹಲಿ,ಜು.28: ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಬೇರೆ ಧರ್ಮಕ್ಕೆ ಮತಾಂತರಗೊAಡರೆ, ಅವರ ಎಸ್‌ಸಿ ಸ್ಥಾನಮಾನವನ್ನು ತಕ್ಷಣವೇ ರದ್ದುಗೊಳಿಸಲಾಗುವುದು ಎಂದು ಸುಪ್ರೀಂಕೋರ್ಟ್ ಮತ್ತೆ ಪುನರುಚ್ಚರಿಸಿದೆ.
ಹಿಂದೂ, ಸಿಖ್, ಬೌದ್ಧ ಧರ್ಮ ಹೊರತುಪಡಿಸಿ ಕ್ರಿಶ್ಚಿಯನ್ ಅಥವಾ ಇತರ ಧರ್ಮಗಳಿಗೆ ಮತಾಂತರಗೊAಡ ಎಸ್‌ಸಿ ಸಮುದಾಯದವರಿಗೆ ಮೀಸಲಾತಿ ಮತ್ತು ಪ್ರಮಾಣಪತ್ರ ನೀಡಲಾಗದು ಎಂಬ ಆಂಧ್ರಪ್ರದೇಶ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದ ತಕ್ಷಣವೇ ತಮ್ಮ ಎಸ್ ಸಿ ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ ಎಂದು ಆಂಧ್ರಪ್ರದೇಶ ಹೈಕೋರ್ಟ್ ಈ ಹಿಂದೆ ತೀರ್ಪು ನೀಡಿತ್ತು.
ನ್ಯಾ. ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಮನಮೋಹನ್ ಸಿಂಗ್ ಅವರ ದ್ವಿಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿದ್ದು, 1950ರ ಸಂವಿಧಾನದ ಪ್ರಕಾರ, ಹಿಂದೂಗಳು, ಸಿಖ್ಖರು ಮತ್ತು ಬೌದ್ಧರು ಮಾತ್ರ ಎಸ್‌ಸಿ ಸ್ಥಾನಮಾನಕ್ಕೆ ಅರ್ಹರು. ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶ 1950 ರ ಪ್ಯಾರಾ 3 ರ ಅಡಿಯಲ್ಲಿ, ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮ ಹೊರತುಪಡಿಸಿ ಇತರ ಧರ್ಮಗಳನ್ನು ಅನುಸರಿಸುವವರನ್ನು ಎಸ್ ಸಿ ಸಮುದಾಯದ ಸದಸ್ಯರೆಂದು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.ಆದ್ದರಿಂದ ಇತರೆ ಧರ್ಮಕ್ಕೆ ಮತಾಂತರವಾದರೇ ತಕ್ಷಣ ಎಸ್‌ಸಿ ಸ್ಥಾನಮಾನ ಮತ್ತು ಅದರ ಪ್ರಯೋಜನಗಳು ನಿಲ್ಲುತ್ತವೆ. ಹೈಕೋರ್ಟ್ ನೀಡಿದ ಆದೇಶದಲ್ಲಿ ಯಾವುದೇ ದೋಷವಿಲ್ಲ ಎಂದು ಸ್ಪಷ್ಟಪಡಿಸಿದೆ.
ಎಸ್‌ಸಿ ಸ್ಥಾನಮಾನ ಬೇಕು ಎಂದವರು ಕೆಲವು ಷರತ್ತುಗಳನ್ನು ಪಾಲಿಸಬೇಕಿದ್ದು, ಹುಟ್ಟಿನಿಂದಲೇ ಎಸ್ಸಿ ಆಗಿದ್ದು, ಆತ ಸ್ವಯಂಪ್ರೇರಣೆಯಿAದ ತಮ್ಮ ಮೂಲ ಧರ್ಮಕ್ಕೆ ಮರಳಿದರೆ ಮಾತ್ರ ಎಸ್‌ಸಿ ಸ್ಥಾನಮಾನ ಪಡೆಯಬಹುದಾಗಿದೆ ಎಂದಿದೆ.




.
.
.
.
.
.
.
.
.
.
.
.
.
.
.
.
.
.
.
.
