
ಕಾರ್ಕಳ,ಜು.28: ಎಸ್ .ವಿ. ಟಿ ಪದವಿಪೂರ್ವ ಕಾಲೇಜು ಕಾರ್ಕಳ ಇಂಟರ್ಯಾಕ್ಟ್ ಕ್ಲಬ್ ಹಾಗೂ ರೋಟರಿ ಕ್ಲಬ್ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಎಸ್ .ವಿ. ಟಿ ಪದವಿಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು.
ನಿವೃತ್ತ ಭೂಸೇನೆ ಹಾಗೂ ಕರ್ನಾಟಕ ಸರಕಾರದ ನಿಕಟ ಪೂರ್ವ ವಿಧಾನ ಪರಿಷತ್ ಸದಸ್ಯರಾಗಿದ್ದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ದಿಕ್ಸೂಚಿ ಭಾಷಣದಲ್ಲಿ ಭಾರತೀಯ ಸೈನಿಕರ ಶೌರ್ಯ, ಧೈರ್ಯ ಮತ್ತು ತ್ಯಾಗವನ್ನು ಸ್ಮರಿಸಿಕೊಂಡು, ಕಾರ್ಗಿಲ್ ಯುದ್ದದ ಚಿತ್ರಣವನ್ನು ಎಳೆಎಳೆಯಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ಭಾರತದ ಹೆಮ್ಮೆಯ ಪುತ್ರ “ಆಪರೇಷನ್ ಸಿಂಧೂರ”ದಲ್ಲಿ ಭಾಗವಹಿಸಿದ್ದ ನಿವೃತ್ತ ಯೋಧ ಆನಂದ ಕಬ್ಬಿನಾಲೆ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಆನಂದ ಕಬ್ಬಿನಾಲೆ ಅವರ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊAಡರು.ಎಸ್. ವಿ ಎಜ್ಯುಕೇಶನ್ ಟ್ರಸ್ಟ್ (ರಿ.) ಕಾರ್ಕಳದ ಕಾರ್ಯದರ್ಶಿ ಕೆ. ಪಿ. ಶೆಣೈ ಅಧ್ಯಕ್ಷತೆಯನ್ನು ವಹಿಸಿದ್ದರು
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷ ರೊ. ಕೆ ವಿಜೇಂದ್ರ ಕುಮಾರ್, ಕಾರ್ಯದರ್ಶಿ ರೊ. ಉದಯ ಕುಮಾರ್ ಕಡಂಬ, ಇಂಟರ್ಯಾಕ್ಟ್ ಚೇರ್ಮೆನ್ ರೊ.ಶೇಖರ್ ಹೆಚ್, ಇಂಟರ್ಯಾಕ್ಟ್ ಕ್ಲಬ್ಬಿನ ಅಧ್ಯಕ್ಷೆ ಇಂ.ಪ್ರಣಮ್ಯ, ಕಾರ್ಯದರ್ಶಿ ಇಂ. ದೇವಿಕಾ, ಪ್ರಾಚಾರ್ಯರಾದ ನೇಮಿರಾಜ ಶೆಟ್ಟಿ ಕೆ, ಮುಖ್ಯೋಪಾಧ್ಯಾಯರಾದ ಯೋಗೇಂದ್ರ ನಾಯಕ್, ಮಾಲಿನಿ ಕೆ, ಎಚ್. ಜಿ ಬಂಡಿವಡ್ಡರ್ ಹಾಗೂ ಎಸ್.ವಿ.ಟಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕಿ, ಶಿಕ್ಷಕಿ ಪ್ರಭಾ ಜಿ ಬೋವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಥಮ ವಾಣಿಜ್ಯ ವಿಭಾಗದ ಕುಮಾರಿ ಸಂಧ್ಯಾ ಸನ್ಮಾನ ಪತ್ರ ವಾಚಿಸಿದರು. ಹತ್ತನೇ ತರಗತಿಯ ಕುಮಾರಿ ದೀಕ್ಷಾ ಸ್ವಾಗತಿಸಿದರು. ಹತ್ತನೇ ತರಗತಿಯ ಸಾಕ್ಷಿ ಕಾಮತ್ ವಂದಿಸಿದರು. ದ್ವಿತೀಯ ವಾಣಿಜ್ಯ ವಿಭಾಗದ ಕುಮಾರಿ ಸುಶ್ಮಿತಾ ನಿರೂಪಿಸಿದರು.




.
.
.
.
.
.
.
.
.
.
.
.
.
.
.
.
.
.
.
.
