
ಕಾರ್ಕಳ,ಆ.05: ಕಡ್ತಲ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಯಾಗಿ 2 ವರ್ಷಗಳ ಕಾಲ ಪ್ರಬಾರ ಸೇವೆ ಸಲ್ಲಿಸಿ ಇದೀಗ ಹೆಬ್ರಿ ತಾಲೂಕಿನ ಚಾರ ಪಂಚಾಯತ್ ಗೆ ವರ್ಗಾವಣೆಗೊಂಡ ಸುರೇಖಾ ಅವರಿಗೆ ಬೀಳ್ಕೊಡುಗೆ ಸಮಾರಂಭ ಪಂಚಾಯತ್ ನಲ್ಲಿ ಜರುಗಿತು. ಇದೇ ವೇಳೆ ಮರ್ಣೆ ಗ್ರಾಮ ಪಂಚಾಯತ್ ನಿಂದ ಕಡ್ತಲ ಗ್ರಾಮ ಪಂಚಾಯತ್ ಗೆ ಪ್ರಬಾರ ಅಭಿವೃದ್ಧಿ ಅಧಿಕಾರಿಯಾಗಿ ನೇಮಕಗೊಂಡ ಅಂಕಿತರವರನ್ನು ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಐ.ಪಿ.ಎಸ್ ಅಧಿಕಾರಿ ಬಿ ಸದಾಶಿವ ಪ್ರಭು , ಡಾ. ಪ್ರಮೋದ್ ಕುಮಾರ್ ಹೆಗ್ಡೆ ಕಡ್ತಲ , ಧಾರ್ಮಿಕ ಮುಖಂಡ ಪ್ರಶಾಂತ್ ಬೆಳ್ಳಿರಾಯ, ಮಂಗಳೂರು ಎಂಆರ್ಪಿಎಲ್ನ ವ್ಯವಸ್ಥಾಪಕರಾದ ಅಶೋಕ್ ಕುಮಾರ್ ಹೆಗ್ಡೆ , ಲಕ್ಷ್ಮೀ ಜನಾರ್ದನ ದೇವಸ್ಥಾನದ ಟ್ರಸ್ಟಿ ಮುಂಡಾರು ಪ್ರಸನ್ನ ಕುಮಾರ್ ಶೆಟ್ಟಿ , ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಕೇಶ್ ಕುಮಾರ್ ಹೆಗ್ಡೆ ಹಾಗೂ ಪಂಚಾಯತ್ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಅರುಣ್ ಕುಮಾರ್ ಹೆಗ್ಡೆ ಸ್ವಾಗತಿಸಿ, ಸತೀಶ್ ಪೂಜಾರಿ ವಂದಿಸಿದರು. ವಿನೀತ್ ಹೆಗ್ಡೆ ಹಾಗೂ ದೀಪಕ್ ಕಾಮತ್ ಅವರು ನಿರೂಪಿಸಿದರು.





.
.
.
.
.
.
.
.
.
.
.
.
.
.
.
.
.
.
.
.
