

ನವದೆಹಲಿ, ಸೆ.21: ಸೆಪ್ಟೆಂಬರ್ 28 ರಿಂದ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ಏಳು ಯೂನಿಯನ್‌ಗಳ ಒಕ್ಕೂಟವಾದ ‘ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್’ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಬ್ಯಾಂಕ್ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಎದುರಾಗಬಹುದಾದ ಸವಾಲುಗಳನ್ನು ಎದುರಿಸಲು ಮತ್ತು ತುರ್ತು ಸಿದ್ಧತೆಗಳನ್ನು ಪರಿಶೀಲಿಸಲು ಹಣಕಾಸು ಸಚಿವಾಲಯವು ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಭಾರತೀಯ ಬ್ಯಾಂಕ್‌ಗಳ ಸಂಘ ಮತ್ತು ನಬಾರ್ಡ್ನ ಮುಖ್ಯ ಕಾರ್ಯನಿರ್ವಾಹಕರ ಉನ್ನತ ಮಟ್ಟದ ಸಭೆಯನ್ನು ಇಂದು ಕರೆಯಲಾಗಿದೆ.
ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ, ಮುಷ್ಕರದ ಅವಧಿಯಲ್ಲಿಯೂ ಗ್ರಾಹಕರಿಗೆ ಅಗತ್ಯ ಬ್ಯಾಂಕಿಂಗ್ ಸೇವೆಗಳು ಮತ್ತು ವ್ಯವಹಾರಗಳು ತೊಂದರೆಯಿಲ್ಲದೆ ಮುಂದುವರಿಯುವAತೆ ನೋಡಿಕೊಳ್ಳುವ ಕುರಿತು ಚರ್ಚೆ ನಡೆಯಲಿದೆ. ಬ್ಯಾಂಕ್‌ಗಳ ಅರ್ಧವಾರ್ಷಿಕ ಮುಕ್ತಾಯದ ಅವಧಿಯಲ್ಲೇ ಈ ಮುಷ್ಕರ ಬಂದಿರುವುದರಿAದ ಸೇವೆಗಳಿಗೆ ಉಂಟಾಗಬಹುದಾದ ವ್ಯತ್ಯಯವನ್ನು ಕಡಿಮೆ ಮಾಡಲು ತುರ್ತು ವ್ಯವಸ್ಥೆಗಳ ಬಗ್ಗೆಯೂ ಅಧಿಕಾರಿಗಳು ಸಮಾಲೋಚನೆ ನಡೆಸಲಿದ್ದಾರೆ.
ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಯೂನಿಯನ್‌ಗಳು ಮುಂದಿಟ್ಟಿವೆ. ಐದು ದಿನಗಳ ಕಚೇರಿ ವೇಳೆಯ ಜೊತೆಗೆ, ಪಿಂಚಣಿ ಸೌಲಭ್ಯಗಳಲ್ಲಿ ಸುಧಾರಣೆ, ಪಿಂಚಣಿದಾರರಿಗೆ ಏಕರೂಪದ ತುಟ್ಟಿಭತ್ಯೆ ಸೂತ್ರ ಹಾಗೂ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅಡಿಯಲ್ಲಿ ಬರುವ ನೌಕರರಿಗೆ ಹಳೆಯ ಪಿಂಚಣಿ ಯೋಜನೆಗೆ ಮರಳಲು ಅವಕಾಶ ಕಲ್ಪಿಸಬೇಕು ಎಂಬುದು ಯೂನಿಯನ್‌ಗಳ ಪ್ರಮುಖ ಬೇಡಿಕೆಗಳಾಗಿವೆ. ದೇಶದ ಬ್ಯಾಂಕಿಂಗ್ ಕಾರ್ಯಪಡೆಯ ಶೇಕಡಾ 90 ರಷ್ಟು ಭಾಗವನ್ನು ತಾವೇ ಪ್ರತಿನಿಧಿಸುವುದಾಗಿ ಒಕ್ಕೂಟವು ಹೇಳಿಕೊಂಡಿದೆ. ಸೆಪ್ಟೆಂಬರ್ 26 ಮತ್ತು 27 ರಂದು ವಾರಾಂತ್ಯದ ರಜೆಗಳು ಬರುವುದರಿಂದ, ಈ ಮುಷ್ಕರದ ಕಾರಣದಿಂದಾಗಿ ಸೆಪ್ಟೆಂಬರ್ 26 ರಿಂದ 30 ರವರೆಗೆ ಸತತ ಐದು ದಿನಗಳ ಕಾಲ ಬ್ಯಾಂಕ್ ಶಾಖೆಗಳ ಕಾರ್ಯಾಚರಣೆ ಸ್ತಬ್ಧಗೊಳ್ಳುವ ಸಾಧ್ಯತೆಯಿದ್ದು, ಗ್ರಾಹಕರಿಗೆ ತೀವ್ರ ತೊಂದರೆಯಾಗುವ ಆತಂಕ ಎದುರಾಗಿದೆ. ಈ ಸಂಬAಧ ಈ ಹಿಂದೆ ನಡೆದ ಸಂಧಾನ ಸಭೆಗಳು ವಿಫಲಗೊಂಡಿದ್ದರಿAದ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ





.
.
.
.
.
.
.
.
.
.
.
.
.
.
.
.
.
.
.
.
