
ಕಾರ್ಕಳ,ಆ.07 : ಕಾರ್ಕಳ ವಿಧಾನಸಭಾ ಕ್ಷೇತ್ರದ ರಸ್ತೆ ಮತ್ತು ಸೇತುವೆ ಮೂಲಸೌಕರ್ಯ ಅಭಿವೃದ್ಧಿಗೆ ಕ್ಷೇತ್ರದ ಎರಡು ಪ್ರಮುಖ ಸೇತುವೆಗಳ ನಿರ್ಮಾಣಕ್ಕಾಗಿ 2.05 ಕೋಟಿ ಅನುದಾನ ಮಂಜೂರಾಗಿರುತ್ತದೆ.
ಪಶ್ಚಿಮ ಘಟ್ಟದ ತಪ್ಪಲಿನ್ಲಿರುವ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಬಡಾ ತಿಂಗಳೆ- ತಿಂಗಳೆ ಗರಡಿ ಬಳಿ ಹಾಗೂ ಕಾರ್ಕಳ ತಾಲೂಕು ಈದು ಗ್ರಾಮ ಪಂಚಾಯತ್ ವ್ಯಾಫ್ತಿಯ ನೂರಾಳ್ ಬೆಟ್ಟು ಪೂಂಜಾಜೆ ಕಾವೆರಡ್ಕ ಎಂಬಲ್ಲಿ ಸೇತುವೆ/ ಕಾಲುಸಂಕಗಳು ನಿರ್ಮಾಣ ಆಗಲಿದೆ.
ಸೇತುವೆ/ ಕಾಲುಸಂಕಗಳ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಹಾಗೂ ಇಲಾಖಾ ಸಚಿವರಿಗೆ ಪತ್ರ ಮುಖೇನ ಮನವಿ ಮಾಡಲಾಗಿತ್ತು. ಇದರ ಪರಿಣಾಮವಾಗಿ ಕಾರ್ಕಳ ವಿಧಾನ ಸಭಾ ಕ್ಷೇತ್ರಕ್ಕೆ 2.05 ಕೋಟಿ ರೂ ಅನುದಾನ ಮಂಜೂರಾಗಿದ್ದು ಆದಷ್ಟು ಶೀಘ್ರವಾಗಿ ಇಲಾಖಾ ಪ್ರಕ್ರಿಯೆಗಳನ್ನು ಮುಗಿಸಿ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ವಿಕಾಸ ಶಾಸಕರ ಜನಸೇವಾ ಕಛೇರಿಯ ಪ್ರಕಟಣೆ ತಿಳಿಸಿದೆ.





.
.
.
.
.
.
.
.
.
.
.
.
.
.
.
.
.
.
.
.
