

ಹೆಬ್ರಿ,ಆ.14: ಸೋಮೇಶ್ವರ ವನ್ಯಜೀವಿ ವಲಯದ ಅರಣ್ಯ ವೀಕ್ಷಕರಿಗೆ ವ್ಯಕ್ತಿಗಳಿಬ್ಬರು ಕರ್ತವ್ಯಕ್ಕೆ ಅಡ್ಡಿಪಡಿಸಿ ಕತ್ತಿ ತೋರಿಸಿ ಜೀವ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.
ಕನಕಪ್ಪ ಎಂಬವರು ಅರಣ್ಯ ವೀಕ್ಷಕರಾಗಿದ್ದು ಸೋಮೇಶ್ವರ ವನ್ಯ ಜೀವಿ ವಲಯದ ಕುಚ್ಚೂರು ವನ್ಯಜೀವಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಆ.13 ರಂದು ಅರಣ್ಯ ವೀಕ್ಷಕ ರಾಮಚಂದ್ರ ಅವರೊಂದಿಗೆ ಕುಚ್ಚೂರು ಗ್ರಾಮದ ಹಣೆಗೋಡು ಎಂಬಲ್ಲಿ ಗಸ್ತು ತಿರುಗುವಾಗ ಬೆಳಿಗ್ಗೆ 11 ಗಂಟೆಗೆ ಬೆಳಂಜೆ ನಿವಾಸಿಗಳಾದ ಶಿವರಾಮ ನಾಯ್ಕ ಮತ್ತು ಅವರ ಮಗ ಅರುಣ ಅರಣ್ಯ ವೀಕ್ಷಕರನ್ನು ನೋಡಿ ಓಡಲು ಪ್ರಯತ್ನಿಸಿದ್ದಾರೆ. ಆಗ ಅವರನ್ನು ಹಿಡಿಯಲು ಪ್ರಯತ್ನಿಸಿದಾಗ ಶಿವರಾಮ ನಾಯ್ಕ ತನ್ನ ಕೈಯಲ್ಲಿ ಇದ್ದ ಸಟ್ಟುಗ ಹಾಗೂ ಅರುಣ ತನ್ನ ಕೈಯಲ್ಲಿ ಕತ್ತಿ ಹಿಡಿದು ಹತ್ತಿರ ಬಂದರೆ ಕಡಿಯುವುದಾಗಿ ಕನಕಪ್ಪ ಅವರಿಗೆ ಕಲ್ಲನ್ನು ಎಸೆದು ಹಾಲ್ಮಡ್ಡಿ ಮರದಿಂದ ಕೆತ್ತಿ ಸಂಗ್ರಹಿಸಿದ ಸುಮಾರು 1 ಕೆಜಿಯಷ್ಟು ಮೇಣ ಕೈಯಲ್ಲಿ ಹಿಡಿದುಕೊಂಡು ಓಡಿ ಪರಾರಿಯಾಗಿದ್ದಾರೆ.
ಆರೋಪಿಗಳು ಅರಣ್ಯ ವೀಕ್ಷಕರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಕತ್ತಿ ತೋರಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




.
.
.
.
.
.
.
.
.
.
.
.
.
.
.
.
.
.
.
.
