

ಬೀದರ್ ಆ.20: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ವಂದೇ ಮಾತರಂ, ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗೆ ಕಾಲೇಜಿನ ಪ್ರಾಂಶುಪಾಲನೇ ಬೆದರಿಕೆ ಹಾಕಿದ ಆಘಾತಕಾರಿ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ಪಟ್ಟಣದ ಶಾಹೀನ್ ಕಾಲೇಜಿನಲ್ಲಿ ನಡೆದಿದ್ದು,ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರ ಧ್ವಜಾರೋಹಣ ಬಳಿಕ ಪಿಯು ವಿದ್ಯಾರ್ಥಿ ಸಾಗರ್ ಗೌಳಿ ಎಂಬಾತ ಭಾರತ್ ಮಾತಾಕಿ ಜೈ, ವಂದೇ ಮಾತರಂಘೋಷಣೆಯನ್ನು ಕೂಗಿದ್ದ. ಆದರೆ ಈ ಘೋಷಣೆಯನ್ನು ಕೂಗಿದ್ದಕ್ಕೆ ಯಾವುದೋ ಪುಂಡ ವಿದ್ಯಾರ್ಥಿಗಳು ಬೆದರಿಕೆ ಹಾಕಿದ್ದಲ್ಲ ಬದಲಾಗಿ ಆ ಶಾಲೆಯ ಪ್ರಾಂಶುಪಾಲರೇ ವಿದ್ಯಾರ್ಥಿ ಸಾಗರ್ ಗೌಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ನಿಜಕ್ಕೂ ಭಾರೀ ಆಘಾತ ಉಂಟು ಮಾಡಿದೆ.
ಶಾಹೀನ್ ಶಾಲೆಯ ಪ್ರಾಂಶುಪಾಲ ಅಬ್ದುಲ್ ಹಕೀಮ್ ಎಂಬಾತನ ವಿರುದ್ಧ ವಿದ್ಯಾರ್ಥಿಯ ಪೋಷಕರು ಗಂಭೀರ ಆರೋಪ ಮಾಡಿದ್ದು, ವಂದೇ ಮಾತರಂ ಧಾರ್ಮಿಕ ಸಮುದಾಯಕ್ಕೆ ಸೇರಿದ ಘೋಷಣೆಯಾಗಿದ್ದು, ಈ ರೀತಿಯ ಘೋಷಣೆಗಳು ನಮ್ಮ ಕಾಲೇಜಿನಲ್ಲಿ ನಡೆಯುವುದಿಲ್ಲ. ಇನ್ನೊಮ್ಮೆ ಕೂಗಬೇಡ ಎಂದು ವಿದ್ಯಾರ್ಥಿ ಸಾಗರ್ ಗೌಳಿಗೆ ಬೆದರಿಕೆ ಹಾಕಿದ್ದಾನೆ ಎಂದು ವಿದ್ಯಾರ್ಥಿ ತಿಳಿಸಿದ್ದಾನೆ. ಶಾಹೀನ್ ಕಾಲೇಜಿನಲ್ಲಿ ಹಿಂದೂ-ಮುಸ್ಲಿಮ್ ವಿದ್ಯಾರ್ಥಿಗಳು ಒಟ್ಟಿಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಶಾಲೆಯ ಪ್ರಾಂಶುಪಾಲ ಧರ್ಮದ ಆಧಾರದ ಮೇಲೆ ವಿದ್ಯಾರ್ಥಿಗಳ ನಡುವೆ ವೈಮನಸು ಮೂಡಿಸಿದ್ದಲ್ಲದೇ ತಾರತಮ್ಯ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ಎಂಬ ಆರೋಪಿಸಿದ್ದಾರೆ.
ವಂದೇ ಮಾತರಂ, ಭಾರತ್ ಮಾತಕೀ ಜೈ ಘೋಷಣೆ ಕೂಗಿದ್ದಕ್ಕೆ ಬೆದರಿಕೆ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಸಾಗರ್ ಗೌಳಿ ಹಾಗೂ ತಂದೆ ಹಿರೋಬಾ ಗೌಳಿ ಚಿಟಗುಪ್ಪಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಿದ್ಯಾರ್ಥಿಯ ದೂರಿನನ್ವಯ ಪೊಲೀಸರು ಪ್ರಾಂಶುಪಾಲರ ಅಬ್ದುಲ್ ಹಕೀಮ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
