

ಹೆಬ್ರಿ, ಆ.21: ಉಡುಪಿಯ ಚಿಟ್ಪಾಡಿಯಲ್ಲಿ ಮುಂಬರುವ ಡಿಸೆಂಬರ್ 20 ರಂದು ನಡೆಯಲಿರುವ ವಿಶ್ವ ದೇವಾಡಿಗ ಮಹಾಮಂಡಲದ ಬೃಹತ್ ಮಹಾ ಅಧಿವೇಶನದ ಯಶಸ್ಸಿಗಾಗಿ ಹೆಬ್ರಿ ತಾಲೂಕು ದೇವಾಡಿಗ ಸಂಘದ ಕಚೇರಿಯಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.ಸಭೆಯ ಅಧ್ಯಕ್ಷತೆಯನ್ನು ಹೆಬ್ರಿ ದೇವಾಡಿಗ ಸಂಘದ ಅಧ್ಯಕ್ಷರಾದ ಶಂಕರ್ ದೇವಾಡಿಗ ಅವರು ವಹಿಸಿದ್ದರು.
ಅಧಿವೇಶನವನ್ನು ಅತ್ಯಂತ ವ್ಯವಸ್ಥಿತವಾಗಿ ಮತ್ತು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಸಂಘದ ವಿವಿಧ ವಿಭಾಗಗಳಿಗೆ ಕಾರ್ಯಕರ್ತರನ್ನು ನೇಮಿಸುವ ಕುರಿತು ಹಾಗೂ ಕಾರ್ಯಕರ್ತರ ಜವಾಬ್ದಾರಿಗಳ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಶಂಕರ್ ದೇವಾಡಿಗ ಚಾರ, ಸದಾನಂದ ಮೊಯ್ಲಿ ಚಾರ, ಸದಾಶಿವ ಸೇರಿಗಾರ್ ವರಂಗ, ಉದಯ ಸೇರಿಗಾರ್ ಪಾಂಡುಕಲ್ಲು , ರಾಘವೇಂದ್ರ ದೇವಾಡಿಗ ಚಾರ, ಸುಧಾಕರ ಸೇರಿಗಾರ್ ಕೊಳಗುಡ್ಡೆ, ವಾಸುದೇವ ಸೇರಿಗಾರ್ ಶಿವಪುರ , ಪ್ರದೀಪ್ ದೇವಾಡಿಗ ಮುದ್ರಾಡಿ, ಅಜಯ್ ದೇವಾಡಿಗ ವರಂಗ, ನಾರಾಯಣ ದೇವಾಡಿಗ ಹೆಬ್ರಿ , ಪ್ರಮೀಳಾ R ದೇವಾಡಿಗ ಹೆಬ್ರಿ , ಜ್ಯೋತಿ S ದೇವಾಡಿಗ ಹೆಬ್ರಿ ಹಾಗೂ ವಿನೋದ ದೇವಾಡಿಗ ಹೆಬ್ರಿ ಉಪಸ್ಥಿತರಿದ್ದು, ಅಧಿವೇಶನದ ಯಶಸ್ಸಿಗೆ ಕೈ ಜೋಡಿಸುವಂತೆ ಕರೆ ನೀಡಿದರು.





.
.
.
.
.
.
.
.
.
.
.
.
.
.
.
.
.
.
.
.
