

ಬೆಂಗಳೂರು, , ಆ.25: ಆರೆಸ್ಸೆಸ್ ಸಂಘಟನೆ ವಿರುದ್ಧ ನಿರಂತರವಾಗಿ ಕೆಂಡಕಾರುತ್ತಿದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ವಿಧಾನ ಪರಿಷತ್ತಿನಲ್ಲಿ ತೀವೃ ಮುಖಭಂಗವಾಗಿದೆ. ಕಾರ್ಕಳ ಶಾಸಕ ಮಾಜಿ ಸಚಿವ ಸುನಿಲ್ ಕುಮಾರ್ ಅವರು ಸದನದಲ್ಲಿ RSS ಪಥಸಂಚಲನದಲ್ಲಿ 2025ರಿಂದ ಈವರೆಗೂ ನಡೆದ ದೊಂಬಿ, ಗಲಾಟೆಗಳು, ಕೋಮು ಗಲಭೆಗಳು ನಡೆದಿವೆಯೇ ಹಾಗೂ RSSಸಂಘಟನೆಯ ವಿರುದ್ಧ ಎಷ್ಟು ಪ್ರಕರಣಗಳು ದಾಖಲಾಗಿವೆ ಎಂದು ಗೃಹ ಇಲಾಖೆಗೆ ಪ್ರಶ್ನೆ ಕೇಳಿದ್ದರು. ಶಾಸಕರ ಪ್ರಶ್ನೆಗೆ ಉತ್ತರಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ,RSS ವಿರುದ್ಧ ಈವರೆಗೂ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಉತ್ತರಿಸಿದ್ದಾರೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರ ಇದೇ ಉತ್ತರವನ್ನು ಅಸ್ತçವಾಗಿ ಬಳಸಿರುವ ಸುನಿಲ್ ಕುಮಾರ್,RSS ಸಂಘಟನೆ ಬಗ್ಗೆ ದಿನಬೆಳಗಾದರೆ ದ್ವೇಷ ಕಕ್ಕುವ ಗೃಹ ಸಚಿವ ಪ್ರಿಯಾಂಕ ಖರ್ಗೆಯವರು,RSS ಪಂಥ ಸಂಚಲನದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ವಿಧಾನ ಪರಿಷತ್ತಿನಲ್ಲಿ ಉತ್ತರಿಸಿದ್ದಾರೆ.ಕಳೆದ 2025 ರಲ್ಲಿ ಅಂದಿನ ಗೃಹ ಸಚಿವ ಡಾ.ಜಿ.ಪರಮೇಶ್ವರ ಕೂಡಾ ಇದೇ ಉತ್ತರ ನೀಡಿದ್ದರು. ಕಾಂಗ್ರೆಸ್ ಪಕ್ಷವೇ ಸಂಘಟನೆ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಕಾಂಗ್ರೆಸ್ ನಾಯಕರು ಎಷ್ಟೇ ಸುಳ್ಳು ಹೇಳಿದರೂ ಸಂಘದ ಸಂಸ್ಕಾರಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ ಎಂದು ಸುನಿಲ್ ಕುಮಾರ್ ಕೆಂಡಕಾರಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
