

ಕಾರ್ಕಳ,ಆ.25: ಮಣಿಪಾಲ ಆರೋಗ್ಯ ಕಾರ್ಡ್–2026ರ ನೋಂದಣಿಗೆ ಆಗಸ್ಟ್ 31 ಕೊನೆಯ ದಿನವಾಗಿದ್ದು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ವ್ಯವಸ್ಥಾಪಕ ಮೋಹನ್ ಶೆಟ್ಟಿ ಹೇಳಿದರು.
ಅವರು ಆ.25 ರಂದು ಮಂಗಳವಾರ ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ವಿತರಿಸಿ ಮಾತನಾಡಿ,ಕಳೆದ 26 ವರ್ಷಗಳಿಂದ ಈ ಯೋಜನೆ ಸಾರ್ವಜನಿಕರಿಗೆ ಆರೋಗ್ಯ ಸೇವೆಯಲ್ಲಿ ನೆರವಾಗುತ್ತಿದ್ದು, ಪ್ರಸ್ತುತ ಸುಮಾರು 6.5 ಲಕ್ಷ ಸದಸ್ಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ಮಾಹೆ ಸಮೂಹ ಆಸ್ಪತ್ರೆಗಳಲ್ಲಿ ವಿವಿಧ ಆರೋಗ್ಯ ಸೇವೆಗಳಿಗೆ ರಿಯಾಯಿತಿ ಒದಗಿಸುವ ಈ ಕಾರ್ಡ್ ನೋಂದಣಿಯ ನಂತರ ತಿಂಗಳ 15ನೇ ತಾರೀಖಿನಿಂದ ಜಾರಿಗೆ ಬರಲಿದ್ದು, 2027ರ ಆಗಸ್ಟ್ 15ರವರೆಗೆ ಮಾನ್ಯವಾಗಿರುತ್ತದೆ. ವೈಯಕ್ತಿಕ ಸದಸ್ಯತ್ವಕ್ಕೆ ವಾರ್ಷಿಕ ₹350, ಕೌಟುಂಬಿಕ ಸದಸ್ಯತ್ವಕ್ಕೆ ₹700 ಹಾಗೂ ಕೌಟುಂಬಿಕ ಪ್ಲಸ್ ಸದಸ್ಯತ್ವಕ್ಕೆ ₹900 ಶುಲ್ಕ ನಿಗದಿಪಡಿಸಲಾಗಿದೆ ಎಂದರು.
ಮಣಿಪಾಲ ಆರೋಗ್ಯ ಕಾರ್ಡ್ 2026 ನೋಂದಣಿಯು ನಮ್ಮ ಅಧಿಕೃತ ಪ್ರತಿನಿಧಿಗಳ ಮೂಲಕ ಮತ್ತು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಮಾಹಿತಿ ಕೇಂದ್ರಗಳಲ್ಲಿ ಲಭ್ಯವಿದೆ. ಅಥವಾ ನಾರಾಯಣ ನಾಯಕ್ – 9964684643, ಸೈಂಟ್ ಮಿಲಾಗ್ರೆಸ್ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿಮಿಟೆಡ್ ಕಾರ್ಕಳ ಮತ್ತು ಅದರ ಎಲ್ಲಾ ಶಾಖೆಗಳು – 8884414389, ಜನಹಿತ ಸೌಹಾರ್ದ ಸಹಕಾರಿ ಸಂಘ, ಕಾರ್ಕಳ ,988041149 ಸಂಪರ್ಕಿಸಿ ಕಾರ್ಡ್ ಪಡೆಯಬಹುದಾಗಿದೆ ಎಂದರು.
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ತಜ್ಞ ವೈದ್ಯರ ಸಮಾಲೋಚನಾ ಶುಲ್ಕದಲ್ಲಿ ಶೇ.50, ಪ್ರಯೋಗಾಲಯ ಪರೀಕ್ಷೆಗಳಲ್ಲಿ ಶೇ.25 ಹಾಗೂ ರೇಡಿಯಾಲಜಿ ಸೇವೆಗಳಲ್ಲಿ ಶೇ.20ರಷ್ಟು ರಿಯಾಯಿತಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕಾರ್ಡ್ ಸದಸ್ಯರು ಪಡೆಯಬಹುದಾಗಿದೆ. ಮಣಿಪಾಲ, ಉಡುಪಿ, ಕಾರ್ಕಳ, ಮಂಗಳೂರು, ಅತ್ತಾವರ ಹಾಗೂ ಕಟೀಲು ಸೇರಿದಂತೆ ಮಾಹೆ ಸಮೂಹ ಆಸ್ಪತ್ರೆಗಳು, ಮಣಿಪಾಲ ದಂತ ಮತ್ತು ಆಯುರ್ವೇದ ಆಸ್ಪತ್ರೆಗಳಲ್ಲಿಯೂ ಕಾರ್ಡ್‌ನ ಪ್ರಯೋಜನ ಪಡೆಯಬಹುದು.
ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ವ್ಯವಸ್ಥಾಪಕ ನಟೇಶ್ ಮಾತನಾಡಿ, ಕಾರ್ಕಳದ ರೋಟರಿ ಆಸ್ಪತ್ರೆ 24 ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಸಜ್ಜಿತ ಆಸ್ಪತ್ರೆಯಾಗಿ ಅಭಿವೃದ್ಧಿಗೊಳ್ಳುತ್ತಿದೆ. ಹೆಚ್ಚಿನ ವೈದ್ಯಕೀಯ ಸೌಲಭ್ಯಗಳು ಹಾಗೂ ಸೇವೆಗಳು ಕಾರ್ಕಳದಲ್ಲೇ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಆಸ್ಪತ್ರೆಯು ವಿಮಾ ಸೌಲಭ್ಯಗಳೊಂದಿಗೆ ಎನ್‌ಎಬಿಎಚ್ ಮಾನ್ಯತೆಯಡಿ ಉತ್ತಮ ಆರೋಗ್ಯ ಸೇವೆ ನೀಡುತ್ತಿದೆ. ಕಾರ್ಕಳದ ಬಹುನಿರೀಕ್ಷಿತ ರಕ್ತನಿಧಿ (ಬ್ಲಡ್ ಬ್ಯಾಂಕ್) ಸೆಪ್ಟೆಂಬರ್ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಸಚಿನ್ ಕಾರಂತ್,ಕಾರ್ಕಳ TMA ಪೈ ಆಸ್ಪತ್ರೆಯ ಮ್ಯಾನೇಜರ್ ನಟೇಶ್, ಮಾರ್ಕೆಟಿಂಗ್ ವಿಭಾಗದ ಆಶ್ಲೋನ್, ಅನಿಲ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಡ್ ಹೊಂದಿರುವ ಸದಸ್ಯರು 88675 79797 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ತಮ್ಮ ಕಾರ್ಡ್ ನೋಂದಣಿ ಸ್ಥಿತಿ ಮತ್ತು ಸಿಂಧುತ್ವ ವಿವರವನ್ನು ಪರಿಶೀಲಿಸಬಹುದು. ಇತರ ಆಸ್ಪತ್ರೆಗಳಲ್ಲಿನ ರಿಯಾಯಿತಿಗಳು, ಸದಸ್ಯತ್ವ ಪ್ರಯೋಜನಗಳು ಮತ್ತು ನೋಂದಣಿ ಕುರಿತು ವಿವರಗಳಿಗಾಗಿ, www.manipalhealthcard.com ಗೆ ಭೇಟಿ ನೀಡಿ ಅಥವಾ 99808 54700 / 0820-2923748 ಅನ್ನು ಸಂಪರ್ಕಿಸಬಹುದಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
