

ಕಾರ್ಕಳ, ಆ.29:ಬಿಲ್ ಬರ್ತಿದೆ ಆದ್ರೆ ನೀರು ಮಾತ್ರ ಬರ್ತಿಲ್ಲ ಎನ್ನುವುದು ಸರ್ವೇಸಾಮಾನ್ಯ ದೂರುಗಳು, ಆದರೆ ನೀರು ಬರ್ತಿದೆ ಬಿಲ್ ಮಾತ್ರ ಬರ್ತಿಲ್ಲ ಎಂದು ಕೇಳಿದ್ದೀರಾ? ಹೌದು ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಜನರಿಗೆ ನೀರು ಬರುತ್ತಿದೆ ಆದರೆ ತಿಂಗಳ ಬಿಲ್ ಬರುತ್ತಿಲ್ಲ.ಪುರಸಭೆ ಅಧಿಕಾರಿಗಳ ನಡುವಿನ ಹೊಂದಾಣಿಕೆ ಕೊರತೆಯಿಂದ ಸಮರ್ಪಕವಾಗಿ ನೀರಿನ ಬಿಲ್ಲು ಸಂಗ್ರಹಣೆಯಾಗದೇ ಆದಾಯಕ್ಕೂ ಕತ್ತರಿಬಿದ್ದಿದೆ.
ಸರ್ಕಾರಿ ಆಡಳಿತ ವ್ಯವಸ್ಥೆ ಸುಲಲಿತವಾಗಿ ನಡೆಯಬೇಕಾದರೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ನಿರ್ವಹಿಸಬೇಕು. ಒಂದುವೇಳೆ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲದಿದ್ದರೆ ಇದರ ನೇರ ಪರಿಣಾಮ ಜನರು ಅನುಭವಿಸಬೇಕಾಗುತ್ತದೆ. ಕಾರ್ಕಳ ಪುರಸಭೆ ಕಚೇರಿಯಲ್ಲಿ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆ ಎದ್ದು ಕಾಣುತ್ತಿದ್ದು, ಹೊಣೆಗಾರಿಕೆಯ ವಿಚಾರದಲ್ಲಿ ಅಧಿಕಾರಿಗಳು ಪರಸ್ಪರ ಕಸರೆರಚಾಟದಲ್ಲಿ ತೊಡಗಿದ್ದಾರೆ. ಇದರಿಂದಾಗಿ ಪುರಸಭೆ ಆಡಳಿತದ ವೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಸಾರ್ವಜನಿಕರಿಗೆ ಅನಗತ್ಯ ಕಿರಿಕಿರಿಯಾಗುತ್ತಿದೆ.
ನೀರಿನ ನಿಲ್ಲು ಸಂಗ್ರಹಣೆಗೆ ಟೆಂಡರ್ ಕರೆಯದ ಕಾರಣದಿಂದ ಒಂದು ತಿಂಗಳಿನಿAದ ಗ್ರಾಹಕರಿಗೆ ನೀರಿನ ಬಿಲ್ ಸಿಗ್ತಿಲ್ಲ, ಇದರಿಂದ ಗ್ರಾಹಕರು ಬಿಲ್ ಪಾವತಿಸಲಾಗದೇ ಪರದಾಡುವಂತಾಗಿದೆ.ಪುರಸಭೆ ಇಂಜಿನಿಯರ್ ರೇಣುಕಾ ಅವರು ಒಂದು ತಿಂಗಳು ರಜೆ ಮೇಲೆ ತೆರಳಿದ್ದ ಸಂದರ್ಭದಲ್ಲಿ ನೀರಿನ ಬಿಲ್ ಸಂಗ್ರಹಣೆಯ ಟೆಂಡರ್ ಅವಧಿ ಮುಕ್ತಾಯದ ಹಂತದಲ್ಲಿತ್ತು ಎನ್ನುವ ಮಾಹಿತಿಯಿದೆ. ಈ ಕುರಿತು ರೇಣುಕಾ ಅವರನ್ನು ಪ್ರಶ್ನಿಸಿದರೆ, ನಾನು ರಜೆ ಮೇಲೆ ತೆರಳಿದಾಗ ನನ್ನ ಬದಲಿಗೆ ಬಂದ ಇಂಜಿನಿಯರ್ ಟೆಂಡರ್ ಕರೆಯಬೇಕಿತ್ತು ಆದರೆ ಅವಧಿ ಮುಗಿದರೂ ಟೆಂಡರ್ ಕರೆಯದೇ ಈ ಗೊಂದಲ ಸೃಷ್ಟಿಯಾಗಿದೆ ಎಂದಿದ್ದಾರೆ. ಆದರೆ ಈ ಗೊಂದಲದ ಕುರಿತು ಮುಖ್ಯಾಧಿಕಾರಿ ಲೀನ್ ಬ್ರಿಟ್ಟೋ ಅವರನ್ನು ಕೇಳಿದರೆ ಅವರು ಹೇಳೋದೇ ಬೇರೆ, ಇಂಜಿನಿಯರ್ ರೇಣುಕಾ ಅವರು ಟೆಂಡರ್ ಕರೆಯಬೇಕಿತ್ತು ಆದರೆ ಅವರು ಟೆಂಡರ್ ಕರೆಯದ ಹಿನ್ನಲೆಯಲ್ಲಿ ಈ ಸಮಸ್ಯೆ ಉದ್ಭವಿಸಿದೆ, ಈ ಬಗ್ಗೆ ಅವರನ್ನೇ ಕೇಳಿ ಎಂದಿದ್ದಾರೆ. ಅಧಿಕಾರಿಗಳ ನಡುವೆ ಹೊಂದಾಣಿಕೆ ಕೊರತೆಯಿಂದ ಪುರಸಭೆಗೆ ನಿರೀಕ್ಷಿತ ಮಟ್ಟದಲ್ಲಿ ನೀರಿನ ಬಿಲ್ ಸಂಗ್ರಹಣೆಯಾಗುತ್ತಿಲ್ಲ, ಅಧಿಕಾರಿಗಳ ಕಿತ್ತಾಟದಿಂದ ಜನರು ಕೂಡ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
