

ಬೆಂಗಳೂರು,ಆ.29: ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಔಷಧಗಳ ಗುಣಮಟ್ಟದ ಕುರಿತು ಆತಂಕಕಾರಿ ವರದಿಯೊಂದು ಹೊರಬಿದ್ದಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ನಡೆಸಲಾದ ತಪಾಸಣೆ ವೇಳೆ ಜ್ವರದ ಸಾಮಾನ್ಯ ಮಾತ್ರೆ ಪ್ಯಾರಾಸಿಟಮಾಲ್ನಿಂದ ಹಿಡಿದು ಜೀವರಕ್ಷಕ ಐವಿ ಫ್ಲೂಯಿಡ್ಗಳವರೆಗೆ ಒಟ್ಟು 301 ಔಷಧ ಬ್ಯಾಚ್ಗಳು ನಿಗದಿತ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿವೆ.
19.2 ಕೋಟಿ ರೂ ಮೌಲ್ಯದ ಔಷಧಗಳು ಗುಣಮಟ್ಟ ಕಳಪೆ!
ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ ಮೂಲಕ ಖರೀದಿಸಲಾದ ವಿವಿಧ ಮಾದರಿಯ 98 ಪ್ರಕಾರದ ಔಷಧಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಮಾನದಂಡಕ್ಕೆ ತಕ್ಕಂತಿಲ್ಲ ಎಂಬುದು ಧೃಡಪಟ್ಟಿದೆ. ಈ ಪಟ್ಟಿಯಲ್ಲಿ ಪ್ರತಿದಿನ ಬಳಸುವ ಇಬುಪ್ರೊಫೇನ್, ಆಂಟಿಬಯೋಟಿಕ್ಸ್, ಐರನ್ ಮಾತ್ರೆಗಳು ಹಾಗೂ ಕಾಂಪ್ಲೆಕ್ಸ್ ಇಂಜೆಕ್ಷನ್ಗಳು ಸೇರಿವೆ. 2021-22 ರಲ್ಲಿ ಗರಿಷ್ಠ 9 ಕೋಟಿ ರೂ. ಮೌಲ್ಯದ 77 ಬ್ಯಾಚ್ಗಳು ಕಳಪೆ ಎಂದು ಕಂಡುಬAದಿದ್ದವು. 2024-25 ರಲ್ಲಿ ಹಠಾತ್ ಏರಿಕೆ ಕಂಡುಬAದಿದ್ದು, 5.2 ಕೋಟಿ ರೂ. ಮೌಲ್ಯದ 146 ಬ್ಯಾಚ್ಗಳನ್ನು ಕಳಪೆ ಸಾಲಿಗೆ ಸೇರಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಸಚಿವರು, ಕಳಪೆ ಔಷಧ ಪೂರೈಸಿದ ಕನಿಷ್ಠ 5 ಕಂಪನಿಗಳನ್ನು ಈಗಾಗಲೇ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ. ನಿಗದಿತ ಗುಣಮಟ್ಟ ಹೊಂದಿಲ್ಲದ ಔಷಧ ಬ್ಯಾಚ್ಗಳನ್ನು ಪತ್ತೆಹಚ್ಚಿದ ತಕ್ಷಣವೇ ಅವುಗಳ ಸರಬರಾಜನ್ನು ಸ್ಥಗಿತಗೊಳಿಸಿ, ಸರಬರಾಜುದಾರರಿಗೆ 10 ದಿನಗಳ ಒಳಗೆ ಉತ್ತಮ ಗುಣಮಟ್ಟದ ಹೊಸ ಸ್ಟಾಕ್ ನೀಡುವಂತೆ ಸೂಚನೆ ನೀಡಲಾಗುತ್ತಿದೆ.





.
.
.
.
.
.
.
.
.
.
.
.
.
.
.
.
.
.
.
.
