

ಕಾರ್ಕಳ, ಸೆ.10: ಇತಿಹಾಸದಲ್ಲಿ ಪ್ರಥಮ ಬಾರಿಗೆ ಬೆಂಗಳೂರು ಹೊರತುಪಡಿಸಿ ಕರಾವಳಿಯ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಿರುವುದು ಸ್ವಾಗತಾರ್ಹ.ಕರಾವಳಿ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವಲ್ಲಿ ಸಂಪುಟ ಮಹತ್ವದ ನಿರ್ಣಯ ಕೈಗೊಳ್ಳಬೇಕಿದೆ.ಇದರ ಜೊತೆಗೆ ಕಳೆದ ಹಲವು ವರ್ಷಗಳಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನ ಹಾಗೂ ಇತರ ಅರಣ್ಯ ಪ್ರದೇಶಗಳಲ್ಲಿ ತಲೆತಲಾಂತರದಿಂದ ವಾಸಿಸುತ್ತಿರುವ ಮಲೆಕುಡಿಯ ಸಮಯದಾಯದ ಜನರು ಸಮರ್ಪಕವಾದ ರಸ್ತೆ,ವಿದ್ಯುತ್, ನೀರು,ವಸತಿ ಸೇರಿದಂತೆ ಇತರೇ ಮೂಲಸೌಕರ್ಯಗಳಿಲ್ಲದೇ ಅಸಂಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ.
ಈ ಬಾರಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ಇಲ್ಲಿನ ಅರಣ್ಯ ವಾಸಿಗಳ, ಆರೋಗ್ಯ ಉದ್ಯೋಗ, ಶಿಕ್ಷಣ, ಮನೆ, ವಸತಿ, ಮೂಲ ಸೌಕರ್ಯಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ವಿಶೇಷ ತ್ತನ್ನು ನೀಡಬೇಕು.ಬುಡಕಟ್ಟು ಸಮುದಾಯ ಹಾಗೂ ಇತರ ಪಾರಂಪರಿಕ ಅರಣ್ಯವಾಸಿಗಳ ಆಶಾದಾಯಕ ಅರಣ್ಯ ಹಕ್ಕು ಕಾಯ್ದೆ, ಸಮರ್ಪಕ ಜಾರಿ ಯಾಗುವುದರ ಮುಖಾಂತರ, ಕಾಯ್ದೆಯ ಸೆಕ್ಷನ್ 3(2) ಅವಕಾಶದಡಿ ಜಿಲ್ಲಾ ಹಂತದಲ್ಲೇ ರಸ್ತೆ ,ವಿದ್ಯುತ್ ಇನ್ನಿತರ ಮೂಲಭೂತ ಸೌಕರ್ಯಗಳಿಗೆ ತುರ್ತಾಗಿ ಅವಕಾಶ ಕೊಡಬೇಕಾಗಿದೆ. ರಾಜ್ಯದ ಅರಣ್ಯಾಧಾರಿತ 13 ಬುಡಕಟ್ಟು ಸಮುದಾಯದವರಿಗೆ ನೀಡಲಾಗುತ್ತಿದ್ದ ಪೌಷ್ಟಿಕ ಆಹಾರವನ್ನು ಕಳೆದ ಏಳು ತಿಂಗಳಿನಿಂದ ಸರಕಾರ ನೀಡುತ್ತಿಲ್ಲ ಇದನ್ನು ಕೂಡಲೇ ವಿತರಣೆ ಮಾಡಬೇಕು.ಕಸ್ತೂರಿ ರಂಗನ್ ವರದಿ ಜಾರಿ ಕುರಿತಂತೆ ಸಾಧಕ ಭಾಗದ, ಬಗ್ಗೆ ವಿಸ್ತೃತ ಚರ್ಚೆಯೊಂದಿಗೆ ಭೌತಿಕ ಸಮೀಕ್ಷೆ ನಡೆಸಿ ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಡಬೇಕು ಎಂದು ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು ಆಗ್ರಹಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
