

ಕಾರ್ಕಳ, ಸೆ 19: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹಿಂದಿನಿAದ ವೇಗವಾಗಿ ಬಂದ ಕಾರು ಡಿಕ್ಕಿಯಾದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದ ಕೊಡಿಮಾರು ಎಂಬಲ್ಲಿ ಸಂಭವಿಸಿದೆ.
ಮುಲ್ಲಡ್ಕ ಗ್ರಾಮದ ಪುಂಚಡ್ಕ ಪಾದೆ ಮನೆ ಕೊಡಿಮಾರು ನಿವಾಸಿ ವಸಂತ ಮೂಲ್ಯ(73) ಎಂಬವರು ಮೃತಪಟ್ಟ ವ್ಯಕ್ತಿ. ವಸಂತ ಮೂಲ್ಯ ಶುಕ್ರವಾರ ಸಂಜೆ 7.45ರ ವೇಳೆಗೆ ಮುಂಡ್ಕೂರು ಕಡೆಯಿಂದ ಬಸ್ಸಿನಲ್ಲಿ ಬಂದು ಮುಲ್ಲಡ್ಕ ಗ್ರಾಮದ ಕೊಡಿಮಾರು ಎಂಬಲ್ಲಿ ಡೆನ್ಸಿಲ್ ಎಂಬವರ ಮನೆಯ ಬಳಿ ಇಳಿದು ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮುಂಡ್ಕೂರು ಕಡೆಯಿಂದ ಬೆಳ್ಮಣ್ ಕಡೆಗೆ ಅತೀವೇಗವಾಗಿ ಬಂದ ಕೇರಳ ಮೂಲದ ನೋಂದಣಿಯ ಕಾರು ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.ಈ ಅಪಘಾತದ ಪರಿಣಾಮ ವಸಂತ ಮೂಲ್ಯ ರವರು ರಸ್ತೆಗೆ ಬಿದ್ದು ಅವರ ಬಲಗಾಲಿಗೆ ಮುಖಕ್ಕೆ, ಬಲ ಕೈಗೆ ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.
ಕಾರು ಚಾಲಕನ ನಿರ್ಲಕ್ಷö್ಯತನದ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
