

ಕಾರ್ಕಳ, ಅ.01: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕಾರ್ಕಳದ ಮಿಯ್ಯಾರಿನ ಫೋಟೋಗ್ರಾಫರ್ ಗೆ ಬರೋಬ್ಬರಿ 2.60 ಲಕ್ಷ ವಂಚಿಸಿದ ಪ್ರಕರಣ ನಡೆದಿದೆ. ಮಿಯ್ಯಾರಿನ ಫೋಟೋಗ್ರಾಫರ್ ಪ್ರಕಾಶ ಆಚಾರ್ಯ ಎಂಬವರು ವಂಚನೆಗೊಳಗಾದವರು.
ಬೆಂಗಳೂರಿನ ನಿವಾಸಿ ಮೋಹಿತ್ ಮತ್ತು ಇತರ ಆರೋಪಿಗಳು ಪ್ರಕಾಶ್ ಆಚಾರ್ಯ ಅವರನ್ನು ಸಂಪರ್ಕಿಸಿ ಮಲೇಷಿಯಾದ ರೆಸ್ಟೋರಂಟ್ ನಲ್ಲಿ ಉದ್ಯೋಗ ತೆಗೆಸಿಕೊಡುವುದಾಗಿ ನಂಬಿಸಿ ಜಾಹಿರಾತಿನ ಫೋಟೋ ಮೊಬೈಲಿಗೆ ಕಳುಹಿಸಿ ಬಳಿಕ ಉದ್ಯೋಗದ ಬಗ್ಗೆ ವಿವರ ನೀಡಿ ದಾಖಲೆ ಪತ್ರ ಮಾಡಲು ಮಲೇಷಿಯಕ್ಕೆ ಹೋಗುವ ಖರ್ಚು ಮತ್ತು ವಿಸಾದ ಹಣವನ್ನು ಭರಿಸುವಂತೆ ಹೇಳಿದ್ದರು. ಇದರಂತೆ ಪ್ರಕಾಶ ಆಚಾರ್ಯ ತನ್ನ ಗೂಗಲ್ ಪೇ ಮೂಲಕ ಆರೋಪಿಗಳ ಖಾತೆಗೆ ಹಂತಹಂತವಾಗಿ 2.25 ಲಕ್ಷ ರೂ ವರ್ಗಾವಣೆ ಮಾಡಿದ್ದಾರೆ.
ಹಣ ಪಡೆದುಕೊಂಡ ಆರೋಪಿಗಳು ಮಲೇಷಿಯಕ್ಕೆ ಹೋಗಲು ವಿಮಾನದ ಟಿಕೆಟ್ ಮತ್ತು ಇಮ್ರಿಗೇಷನ್ ಪಾಸ್, ಎಂಪ್ಲಾಯ್ ಮೆಂಟ್ ಪಾಸ್ ಕಳುಹಿಸಿ ಕೊಟ್ಟಿದ್ದರು. ಇದನ್ನು ನಂಬಿ ಪ್ರಕಾಶ್ ಆಚಾರ್ಯು ಮಲೇಷಿಯಕ್ಕೆ ಹೋದಾಗ ಅಲ್ಲಿನ ವಿಮಾನ ನಿಲ್ದಾಣದ ಅದಿಕಾರಿಗಳು ದಾಖಲೆ ಪರಿಶೀಲಿಸಿದಾಗ ಆರೋಪಿಗಳು ನೀಡಿರುವ ಇಮ್ರಿಗೇಷನ್ ಪಾಸ್, ಎಂಪ್ಲಾಯ್ ಮೆಂಟ್ ಪಾಸ್ ನಕಲಿ ಎಂದು ದೃಢಪಟ್ಟಿದೆ. ಇದೇವೇಳೆ ಮಲೇಷಿಯದಲ್ಲಿದ್ದ ಮನ್ವಿರ್ ಸಿಂಗ್ ಎಂಬ ಏಜೆಂಟ್ 35 ಸಾವಿರ ಪಡೆದುಕೊಂಡಿದ್ದಾನೆ. ಆದ್ದರಿಂದ ನಕಲಿ ದಾಖಲೆ ನೀಡಿ ವಂಚಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪ್ರಕಾಶ್ ಆಚಾರ್ಯ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
