

ಕಾರ್ಕಳ,ಅ.01: ಗೃಹೋಪಯೋಗಿ ಉಪಕರಣಗಳ ಮಾರಾಟ ಮಳಿಗೆಯಲ್ಲಿ ಲಕ್ಕಿ ಗಿಫ್ಟ್ ಸ್ಕೀಮ್ ನಲ್ಲಿ ಜನರನ್ನು ಸೇರಿಸಿ ಅವರಿಂದ ಹಣ ವಸೂಲಿ ಮಾಡಿ ಪ್ರತೀ ತಿಂಗಳು ಡ್ರಾ ಮಾಡುವುದಾಗಿ ನಂಬಿಸಿ ಬಳಿಕ ಸ್ಕೀಮ್ ಹಣವನ್ನು ವಂಚಿಸಿದ ಆರೋಪದಲ್ಲಿ ಕಾರ್ಕಳ ಜೋಡುರಸ್ತೆಯ ಶ್ರೀದುರ್ಗಾ ಇಲೆಕ್ಟ್ರಾನಿಕ್ಸ್ & ಫರ್ನಿಚರ್ ಅಂಗಡಿಯ ಮಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಲಕ್ಕಿ ಸ್ಕೀಮ್ ಗೆ ಹಣ ಪಾವತಿಸಿದ ಅಜೆಕಾರು ಮರ್ಣೆ ಗ್ರಾಮದ ರಶ್ಮಿ ಕುಲಾಲ್ ಎಂಬವರು 20 ಸಾವಿರ ಹಣ ಕಳೆದುಕೊಂಡಿದ್ದು, ಶಾಪ್ ಮಾಲಕ ದಾವಣಗೆರೆ ಮೂಲದ ಜಯತೀರ್ಥ ಎಂಬಾತನ ವಿರುದ್ಧ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ. ರಶ್ಮಿ ಕುಲಾಲ್ ಅವರು ಪ್ರತೀ ತಿಂಗಳ ಕಂತು 1 ಸಾವಿರದಂತೆ ಒಟ್ಟು 20 ತಿಂಗಗಳಿಗೆ 20 ಸಾವಿರ ಪಾವತಿಸಿದ್ದರು. ಪ್ರತೀ ತಿಂಗಳು ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಿ ಅವರು ವಿನ್ನರ್ ಆದರೆ ಹಣ ಪಾವತಿಸುವಂತಿಲ್ಲ, ಒಂದುವೇಳೆ ಲಕ್ಕಿ ಡ್ರಾನಲ್ಲಿ ವಿಜೇತರಾಗದವರಿಗೆ ಅವರು ಪಾವತಿಸಿದ ಪೂರ್ತಿ ಹಣ ಅಥವಾ ಅಷ್ಟೇ ಮೌಲ್ಯದ ಸೊತ್ತುಗಳನ್ನು ನೀಡುವುದಾಗಿ ನಂಬಿಸಿ ಇದೀಗ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈತನ ಗಿಫ್ಟ್ ಸ್ಕೀಂಗೆ ಸೇರಿ ಹಲವಾರು ಜನ ಹಣ ಕಳೆದಕೊಂಡಿದ್ದು ಲಕ್ಷಾಂತರ ರೂ ಹಣವನ್ನು ವಂಚಿಸಿ ಎಲ್ಲಾ ಸೊತ್ತುಗಳನ್ನು ಖಾಲಿ ಮಾಡಿ ಶಾಪ್ ಮುಚ್ಚಿ ಜಯತೀರ್ಥ ಪರಾರಿಯಾಗಿದ್ದಾನೆ.





.
.
.
.
.
.
.
.
.
.
.
.
.
.
.
.
.
.
.
.
