

ನವದೆಹಲಿ, ಅ.09: ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಫಾಸ್ಟ್ಟ್ಯಾಗ್ ವಾರ್ಷಿಕ ಪಾಸ್‌ಗಳಿಗೆ ಸಂಬAಧಿಸಿದAತೆ ಕೇವಲ 3 ಸಾವಿರಕ್ಕೆ ಇಡೀ ವರ್ಷ ಟೋಲ್ ಫ್ರೀ ಎಂದು ಘೋಷಣೆ ಮಾಡಿದೆ. ಸ್ಥಳೀಯ ವಾಹನ ಸವಾರರಿಗೆ ದೊಡ್ಡ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಟೋಲ್ ಪ್ಲಾಜಾಗಳ ಬಳಿ ವಾಸಿಸುವ ಸ್ಥಳೀಯರಿಗೆ ಇದರ ಅನುಕೂಲ ಆಗಲಿದೆ. ಅಂದರೆ ಸ್ಥಳೀಯವಾಗಿ ಓಡಾಡುವ ವಾಣಿಜ್ಯೇತರ ಮಾಲೀಕರಿಗೆ ಸ್ಥಳೀಯ ಪಾಸ್ ನೀಡಿ ನೇರವಾಗಿ ಫಾಸ್ಟ್ಟ್ಯಾಗ್ ಜೊತೆ ಲಿಂಕ್ ಮಾಡಲಾಗುತ್ತದೆ. ಟೋಲ್ ಪ್ಲಾಜಾದಿಂದ 20 ಕಿಲೋ ಮೀಟರ್ ವ್ಯಾಪ್ತಿಯೊಳಗೆ ವಾಸವಿರುವ ವಾಣಿಜ್ಯೇತರ ಮಾಲೀಕರಿಗೆ ವಾರ್ಷಿಕ ಸ್ಥಳೀಯ ಫಾಸ್ಟ್ಟ್ಯಾಗ್ ಪಾಸ್ ಶುಲ್ಕದಲ್ಲಿ ಪರಿಷ್ಕರಣೆ ಮಾಡಲಾಗಿದೆ.
ಹಿಂದಿನ ನಿಯಮಗಳ ಪ್ರಕಾರ.. 3,075 ರೂಪಾಯಿಗೆ ವಾರ್ಷಿಕ ಪಾಸ್ ನೀಡಲಾಗಿತ್ತು. ಅದರ ಮೂಲಕ ವರ್ಷದಲ್ಲಿ 200 ಟ್ರಿಪ್‌ಗಳಿಗೆ ಮಾತ್ರ ಅನುಮತಿ ಇತ್ತು. ಪ್ರತಿ ತಿಂಗಳು ನಿರ್ದಿಷ್ಟ ಶುಲ್ಕವನ್ನು ಪಾವತಿಸುವ ಮೂಲಕ ಮಾಸಿಕ ಪಾಸ್ ನವೀಕರಿಸಬೇಕಾಗಿತ್ತು. ಆದರೆ ಹೊಸ ನಿಯಮವು ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲಿದೆ. 3,000 ಶುಲ್ಕದಲ್ಲಿ ವರ್ಷವಿಡೀ ನೀವು ಎಷ್ಟು ಟ್ರಿಪ್ ಬೇಕಾದರೂ ಟೋಪ್ ಪ್ಲಾಜಾ ಮೂಲ ಪ್ರಯಾಣಿಸಬಹುದು. ಹಳೆಯ ನಿಯಮದಂತೆ ಪ್ರತಿ ತಿಂಗಳು ಪಾಸ್ ಅವಧಿ ಮುಗಿಯವ ಚಿಂತೆ ಮಾಡುವ ಬದಲಿಗೆ ವರ್ಷಕ್ಕೊಮ್ಮೆ ರಿಚಾರ್ಜ್ ಮಾಡಿ ನಿಶ್ಚಂತೆಯಿAದ ಇರಬಹುದು.
ಆದರೆ ಕೇಂದ್ರದ ಈ ನಿಯಮವು ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಕ್ಕೆ ಮಾತ್ರ ಸೀಮಿತವಾಗಿದ್ದು, ಪ್ಲಾಜಾದ ಕೇಂದ್ರ ಬಿಂದುವಿನಿAದ 20 ಕಿ.ಮೀ ಒಳಗೆ ಶಾಶ್ವತವಾಗಿ ವಾಸಿಸುವ ನಿವಾಸಿಗಳಿಗೆ ನಿಯಮ ಅನ್ವಯ ಆಗಲಿದೆ. ಕಾರುಗಳು, ಜೀಪ್‌ಗಳು ಸೇರಿದಂತೆ ವೈಟ್‌ಬೋರ್ಡ್ ಹೊಂದಿರುವ ಖಾಸಗಿ ವಾಹನಗಳಿಗೆ ಮಾತ್ರ ಕಟ್ಟುನಿಟ್ಟಾದ ರಿಯಾಯತಿ ನೀಡಲಾಗಿದೆ. ಟ್ಯಾಕ್ಸಿಗಳು ಅಥವಾ ಇತರ ವಾಣಿಜ್ಯ ವಾಹನಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಫಾಸ್ಟ್ಟ್ಯಾಗ್ ಅನ್ನು ಸ್ಥಳೀಯ ಪಾಸ್ ಆಗಿ ಪರಿವರ್ತಿಸಲು ನಿಮ್ಮ ಬಳಿ ದಾಖಲೆಗಳು ಬೇಕಾಗುತ್ತದೆ. ಆಧಾರ್ ಕಾರ್, ಮತದಾರರ ಗುರುತಿನ ಚೀಟಿಯಂತಹ ಸ್ಥಳೀಯ ವಿಳಾಸ ಪುರಾವೆ ಬೇಕೇಬೇಕು. ಹಾಗೆಯೇ ವಾಹನಗಳ ದಾಖಲೆಗಳು ಕೂಡ ಪ್ರಮುಖವಾಗಿದೆ. ಇನ್ನು, ಈ ಎಲ್ಲಾ ಪ್ರಕ್ರಿಯೆಗಳು ಡಿಜಿಟಲ್ ರೂಪದಲ್ಲಿ ಮಾಡಲಾಗುತ್ತದೆ.





.
.
.
.
.
.
.
.
.
.
.
.
.
.
.
.
.
.
.
.
