Share this news

ಕಾರ್ಕಳ,ಅ.08: ಇಂದಿನ ದಿನಗಳಲ್ಲಿ ಯಕ್ಷಗಾನ ಕೇವಲ ಗ್ರಾಮಕ್ಕೆ ಮಾತ್ರ ಸೀಮಿತವಾದ ಕಲೆಯಾಗಿ ಉಳಿದಿಲ್ಲ. ಇದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಒಂದು ಅಪೂರ್ವ ಕಲೆಯಾಗಿದೆ. ಇದೀಗ ತುಳು ಬಾಷೆ ಹೇಗೆ ನಮ್ಮ ರಾಜ್ಯದ ಎರಡನೇ ಭಾಷೆಯಾಗಿ ಮಾನ್ಯತೆ ಪಡೆದು ಕೊಂಡಿದೆಯೋ ಅದೇ ರೀತಿ ರಾಜ್ಯಕ್ಕೂ ಒಂದು ಕಲಾ ಮಾಧ್ಯಮ ಎಂಬುವುದು ಬೇಕು . ಅದಕ್ಕೆ ಅರ್ಹತೆಯುಳ್ಳ ಕಲೆ ಇದ್ದರೆ ಅದು ಯಕ್ಷಗಾನ ಮಾತ್ರ. ಈ ನಿಟ್ಟಿನಲ್ಲಿ ನಮ್ಮ ಯಕ್ಷಗಾನ ಕಲೆ ಕೇವಲ ತೆಂಕು, ಬಡಗುತಿಟ್ಟಿಗೆ ಮಾತ್ರ ಸೀಮಿತವಾಗಿರದೆ ಕರ್ನಾಟಕದ ಎಲ್ಲಾ 22 ಜಿಲ್ಲೆಯನ್ನೊಳಗೊಂಡ ರಾಜ್ಯದ ಸಮಗ್ರ ಕಲೆಯಾಗಿ ಗುರುತಿಸಿಕೊಳ್ಳುವಂತಾಗಬೇಕು . ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ಇದರ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಹೇಳಿದರು.
ಅವರು ಅ. 3 ರಿಂದ ಅ.4 ರವರೆಗೆ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ನಡೆದ ಅಜೆಕಾರು ಕಲಾಭಿಮಾನಿ ಬಳಗ ( ರಿ .) ಮುಂಬಯಿ ಇದರ 25 ನೇ ವರ್ಷದ ರಜತ ಪರ್ವ ಸಂಭ್ರಮಾಚರಣೆ ,ಮುಂಬಯಿ ಯಕ್ಷಗಾನ ಸಮ್ಮೇಳನ – 2026 ಉದ್ಘಾಟಿಸಿ ಮಾತನಾಡಿದರು.

ಶ್ರೀ ಕ್ಷೇತ್ರ ಕಟೀಲು ಅನುವಂಶಿಕ ಅರ್ಚಕರಾದ ಶ್ರೀ ಹರಿನಾರಾಯಣದಾಸ ಅಸ್ರಣ್ಣರು ಮಾತನಾಡಿ, ನಮ್ಮ ಕರಾವಳಿ ಕರ್ನಾಟಕದ ಶ್ರೇಷ್ಠ ಕಲೆಯೊಂದಿದ್ದರೆ ಅದು ಯಕ್ಷಗಾನವಾಗಿದೆ .ಅನಕ್ಷರಸ್ಥರಲ್ಲಿ ಜ್ಞಾನ ವನ್ನು ಮೂಡಿಸುವ ಧರ್ಮವನ್ನು ಭೊಧಿಸುವ ಶಕ್ತಿ ಸಾಮರ್ಥ್ಯವಿರುವ ಕಲೆಯೊಂದಿದ್ದರೆ ಅದು ಯಕ್ಷಗಾನ . ಯಕ್ಷಗಾನದ ಅಡಕವಾಗಿರುವ ಸಾಹಿತ್ಯ ಅತ್ಯಂತ ಪ್ರಬುದ್ಧ ಸಾಹಿತ್ಯವಾಗಿದೆ . ನಮ್ಮ ಸಂಸ್ಕಾರ , ಸಂಸ್ಕೃತಿಯನ್ನು ಉಳಿಸಿ , ಬೆಳೆಸುವಲ್ಲಿ ಯಕ್ಷಗಾನದ ಪಾತ್ರ ಮಹತ್ತರವಾಗಿದೆ. ಯಕ್ಷಗಾನದಿಂದಾಗಿ ನಮ್ಮ ಸಂಸ್ಕೃತಿ ಇಂದು ಉಳಿದಿದೆ . ಇಂತಹ ವೈಶಿಷ್ಠ ಪೂರ್ಣವಾಗಿ ರಾರಾಜಿಸುವ ಈ ಕಲೆಯನ್ನು ರಾಜ್ಯ ಕಲೆಯಾನ್ನಾಗಿಸುವ ಪ್ರಯತ್ನದಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿ ಎಲ್.ಡಿ.ಎಸ್.ಇನ್ಫೋಟೆಕ್ ಪ್ರೈ. ಲಿ ಎಂ.ಡಿ. ಅಮರನಾಥ ಶೆಟ್ಟಿ ಮಾತನಾಡಿ, ಒಂದು ಸಂಸ್ಥೆಗೆ 25 ವರ್ಷ ಕೆಲಸ ಮಾಡಿದರೆ ಅದು ಅನುಭವಾಗುತ್ತದೆ . ಆದರೆ ಒಂದು ಸಂಸ್ಥೆಗೆ 25 ವರ್ಷ ಸಂದರೆ ಅದು ಅನುಭವಲ್ಲ .ಅದು ಸೇವೆಯಾಗುತ್ತದೆ .ಇಂದು ಅಜೆಕಾರು ಕಲಾಭಿಮಾನಿ ಬಳಗ ಕಳೆದ 25 ವರ್ಷದಿಂದ ಯಕ್ಷಗಾನ ಕಲಾ ಸೇವೆಯನ್ನು ಮಾಡುತ್ತಾ ಬಂದಿದೆ. ಇದರ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ಯಕ್ಷಗಾನ ಪ್ರದರ್ಶನ , ತರಭೇತಿ , ಕಲಾವಿದರಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮದ ಮೂಲಕ ಸಮರ್ಪಣಾ ಸೇವೆಯನ್ನು ಸಲ್ಲಿಸಿದ್ದಾರೆ . ಮುಂದಿನ ಯುವ ಪೀಳಿಗೆಗೆ ಕಲೆಯನ್ನು ಹಸ್ತಾಂತರಿಸುವ ಕೆಲಸವನ್ನು ಮಾಡಿದ್ದಾರೆ. ಅವರ ಈ ಸಂಸ್ಥೆಯು ಸುವರ್ಣ ಮಹೋತ್ಸವವನ್ನು ಆಚರಿಸುವಂತಾಗಲಿ ಎಂದರು.
ಬಾAಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅಡ್ವಕೇಟ್ ಡಿ.ಕೆ. ಶೆಟ್ಟಿ , ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಕರ್ನಾಟಕ ಮಲ್ಲ’ ದಿನಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿಯ,ಯಕ್ಷ ಕಲಾರಂಗ, ಕಾರ್ಕಳ ಇದರ ಅಧ್ಯಕ್ಷ ವಿಜಯ ಶೆಟ್ಟಿ ,ಕನ್ನಡ ಭವನ ಇದರ ಉಪಾಧ್ಯಕ್ಷ ಗಿರೀಶ್ ಸಾಲಿಯಾನ್ ಮಾತನಾಡಿದರು.
ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್,ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಬಂಟರ ಸಂಘ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ , ಯಕ್ಷಗಾನ ಸಮಿತಿಯ ಪ್ರಧಾನ ಸಲಹೆಗಾರರಾದ ಡಾ. ಎಂ. ಪ್ರಭಾಕರ್ ಜೋಷಿ , ಪ್ರೋ.ಭಾಸ್ಕರ್ ರೈ ಕುಕ್ಕುವಳ್ಳಿ , ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಬಾಲಕೃಷ್ಣ ಶೆಟ್ಟಿ ಅಜೆಕಾರು ಮೊದಲಾದವರು ಉಪಸ್ಥಿತರಿದ್ದರು .

ಇದೇ ಸಂದರ್ಭದಲ್ಲಿ ಸಮ್ಮೇಳ ಸಂಪುಟ ” ಯಕ್ಷಗಾನ ಮುಂಬೆಳಗು “ಬ್ರಹತ್ ಗ್ರಂಥವನ್ನು ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದ ಎಂ.ಆರ್ .ಬಿ. ಗ್ರೂಫ್ ನ ಸಂಸ್ಥಾಪಕ , ಶ್ರೇಷ್ಠ ಉದ್ಯೋಗಪತಿ ಡಾ.ಪ್ರಕಾಶ್ ಶೆಟ್ಟಿ ಬಂಜಾರ ಲೋಕಾರ್ಪಣೆಗೈದು ಸಂಪಾದಕ ಭಾಸ್ಕರ್ ರೈ ಅವರಿಗೆ ಗ್ರಂಥವನ್ನು ಹಸ್ತಾಂತರಿಸಿದರು.
ಪ್ರೋ. ಭಾಸ್ಕರ್ ರೈ ಕುಕ್ಕುವಳ್ಳಿ ಅವರ ‘ಯಕ್ಷಾಲೋಕ’ ಯಕ್ಷಗಾನ ಸಂಪ್ರಬAಧಗಳ ಸಂಕಲನ ಮತ್ತು ಹರೀಶ ಶೆಟ್ಟಿ ಸೂಡ ಅವರ ‘ಯಕ್ಷ ಪುಚೋಲಿ ಏಳು ಅರ್ಥ ಸಹಿತ ಐದು ಪ್ರಸಂಗಗ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಪಕ್ಕಳ, ಉಪ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಕರ್ನೂರು ಮೋಹನ್ ರೈ , ಅಮೃತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಥಿಯೇಟರ್ ಯಕ್ಷ [ರಿ.] ಇವರಿಂದ ಯಕ್ಷ ಪ್ರಯೋಗ ಸಂಕ್ಷಿಪ್ತ ಪೂರ್ವರಂಗ ಮತ್ತು ‘ಪಂಪಾತೀರ’ ಕಥಾನಕ , ಬೀರ ಸಿರಿತ ಗಾಂಡೀವಿ ” ತುಳು ಯಕ್ಷಗಾನ ತಾಳ ಮದ್ದಳೆ ,ಮುಂಬಯಿ ಯಕ್ಷಗಾನ ಒಂದು ಅವಲೋಕನ , ಯಕ್ಷಗಾನ ಚಿಂತನ ಮಂಥನದ ವಿವಿಧ ಮೂರು ಗೋಷ್ಠಿಗಳು ಜರಗಿದವು. ಸಂಜೆ -ಅಭಿವಂದನ – ರಜತ ಯಕ್ಷರಕ್ಷಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರಗಿತು .

 

 

     

.

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *