

ಕಾರ್ಕಳ,ಅ.09: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ಕಾರ್ಕಳ ತಾಲೂಕು, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಮಿಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉಡುಪಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ದೀಪ ಬೆಳಗಿಸಿ, ತೆಂಗಿನಗರಿ ಬಿಡಿಸುವ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಯೋಜನೆಯ ಎಲ್ಲಾ ಸೌಲಭ್ಯವನ್ನು ಪಡೆಯುವ ನಾವು, ಯೋಜನೆಯ ಸಭೆಯಿಂದ ದೂರ ಉಳಿದರೆ ಹಲವಾರು ಮಾಹಿತಿಗಳಿಂದ ವಂಚಿತರಾಗುತ್ತೇವೆ. ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮವು ಮಹಿಳೆಯರನ್ನು ಸ್ವಾವಲಂಬಿಗಳಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಇದಕ್ಕೆ ಇಂದು ಉತ್ಸುಕತೆಯಿಂದ ಭಾಗವಹಿಸಿರುವ ಮಹಿಳೆಯರೇ ಸಾಕ್ಷಿ. ಇಲ್ಲಿ ಹಾಕಿರುವ ಸ್ವ-ಉದ್ಯೋಗದ ಸ್ಟಾಲ್‌ಗಳು ಮಹಿಳೆಯರ ಸ್ವಾವಲಂಬನೆಯ ಪ್ರತೀಕವಾಗಿದೆ ಎಂದರು.
ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯರಾದ ಶ್ಯಾಮಲಾ ಕುಂದರ್ , “ಸಂಸ್ಕಾರಯುತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ’ ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿ ನಡೆಸಿಕೊಟ್ಟರು. “ಇಂದು ಮಕ್ಕಳು ತಪ್ಪು ಮಾಡಿದಾಗ ‘ಎಲ್ಲರೂ ಕುಡಿಯುತ್ತಾರೆ, ಎಲ್ಲರೂ ಸಿಗರೇಟ್ ಸೇದುತ್ತಾರೆ, ಇದು ಸಾಮಾನ್ಯ’ ಎಂದು ಸುಮ್ಮನಿದ್ದರೆ ಆ ಮಗ ಸಂಸ್ಕಾರವAತನಾಗಲು ಸಾಧ್ಯವಿಲ್ಲ. ಸಂಸ್ಕಾರಯುತ ಜೀವನದ ಅರಿವು ಮೂಡಿಸುವ ಜವಾಬ್ದಾರಿ ಮನೆ ಮಾತೆಯದ್ದು, ಏಕೆಂದರೆ ಜವಾಬ್ದಾರಿ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು” ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾದ ತಾರಾನಾಥ್ ಕೋಟ್ಯಾನ್ ಮಾತನಾಡಿ, ಯೋಜನೆಯು ಕಾರ್ಕಳ ತಾಲೂಕಿನ ಜನರನ್ನು ಹಂತಹAತವಾಗಿ ಅಭಿವೃದ್ಧಿಯೆಡೆಗೆ ಹೇಗೆ ತಂದು ನಿಲ್ಲಿಸಿದೆ ಎಂಬುದನ್ನು ಮೆಲುಕು ಹಾಕಿದರು. “ಯೋಜನೆ ಆರಂಭಿಸಿದ ಯಾವುದೇ ಕಾರ್ಯಕ್ರಮ ನಿಲ್ಲಲಿಲ್ಲ, ಆದರೆ ಜನರ ಯೋಚನೆಗಳು ಬದಲಾಗುತ್ತಿವೆ. ಯೋಜನೆಯ ಜೊತೆ ಹೆಜ್ಜೆ ಇಟ್ಟವರು ಯಾರೂ ಸೋಲಲಿಲ್ಲ” ಎಂದರು.
ರೆAಜಾಳ ಜ್ಞಾನವಿಕಾಸ ಕೇಂದ್ರದ ಕುಡುಮಶ್ರೀ ಸದಸ್ಯರಾದ ವಿಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮಿಯಾರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಸತ್ಯೇಂದ್ರ ನಾಯಕ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಿಯಾರು ವಲಯದ ಸದಸ್ಯರಾದ ಕಿಶೋರ್ ಶೆಟ್ಟಿ, ಮಿಯಾರು ಒಕ್ಕೂಟದ ಅಧ್ಯಕ್ಷರಾದ ವಿಠಲ್ ಎಸ್. ಪೂಜಾರಿ ಉಪಸ್ಥಿತರಿದ್ದರು.
ಕೇಂದ್ರದ ಸದಸ್ಯರಾದ ರತ್ನ ಪೂಜಾರಿ ಚೌಕಿ, ವಿಶಾಲಾಕ್ಷಿ ಮಿಯಾರು ಅನಿಸಿಕೆ ಹಂಚಿಕೊAಡರು. ಪುಷ್ಪಗುಚ್ಛ ಸ್ಪರ್ಧೆ, ಕೌಶಲ್ಯ ಪ್ರದರ್ಶನ ಸ್ಪರ್ಧೆ ಹಾಗೂ ತಾಲೂಕಿನ ವಿವಿಧ ಕೇಂದ್ರದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ತಾಲೂಕಿನ 25 ಜ್ಞಾನವಿಕಾಸ ಕೇಂದ್ರದ ಸದಸ್ಯರು, ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಹಾಗೂ ಮಿಯಾರು ಮಹಾಲಿಂಗೇಶ್ವರ ದೇವಸ್ಥಾನ ಸಮಿತಿಯವರು ಪಾಲ್ಗೊಂಡಿದ್ದರು.
ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ಸ್ವಾಗತಿಸಿ, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ ವಂದಿಸಿದರು.ವಲಯ ಮೇಲ್ವಿಚಾರಕರಾದ ದಿನೇಶ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.





.
.
.
.
.
.
.
.
.
.
.
.
.
.
.
.
.
.
.
.
