

ಕಾರ್ಕಳ,ಅ.09: ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ, ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ತಾಲೂಕು ಪಂಚಾಯತ್ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ, ಘನತ್ಯಾಜ್ಯ ನಿರ್ವಹಣೆ ನಿಯಮಗಳು 2026 – ಮಾಹಿತಿ ಕಾರ್ಯಕ್ರಮ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಎಸ್.ಎಲ್.ಆರ್.ಎಮ್. ಸ್ವಚ್ಛತಾ ಕಾರ್ಯಕರ್ತರಿಗೆ ಗೌರವಾರ್ಪಣೆ ಕಾರ್ಯಕ್ರಮವು ಅ.6 ರಂದು ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರುಗಿತು.
ಉಡುಪಿ ಜಿ.ಪಂ ಮುಖ್ಯ ಯೋಜನಾಧಿಕಾರಿ ಡಾ. ಉದಯ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಘನ ತ್ಯಾಜ್ಯ ನಿರ್ವಹಣೆ ನಿಯಮಗಳು 2026ರ ಬಗ್ಗೆ ವಿವರಿಸಿ ಎಸ್.ಎಲ್.ಆರ್.ಎಮ್ ಸ್ವಚ್ಛತಾ ಸೇನಾನಿಗಳ ಸೇವೆಯನ್ನು ಶ್ಲಾಘಿಸಿದರು. ಅವರ ಅವಶ್ಯಕತೆಗಳನ್ನು ಸರಕಾರದ ಮಟ್ಟದಲ್ಲಿ ಚರ್ಚಿಸಿ ಹೆಚ್ಚಿನ ಸವಲತ್ತುಗಳನ್ನು ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷರಾದ ಹೆಚ್. ಮಂಜುನಾಥ ಹೆಗ್ಡೆ, ರೋಟರಿ ಕ್ಲಬ್ ನ ಮಾರ್ಗದರ್ಶಕರಾದ ರೊ.ಡಾ.ಭರತೇಶ್ ಆದಿರಾಜ್, ಪ್ರಶಾಂತ್ ರಾವ್ ಎಂ.ವಿ,ತಾ.ಪA ಕಾರ್ಯನಿರ್ವಹಣಾಧಿಕಾರಿಗಳಾದ ಕೃಷ್ಣಾನಂದ ಕೆ., ಸಹಾಯಕ ನಿರ್ದೇಶಕರು ತಾಲೂಕು ಪಂಚಾಯತ್ ಕಾರ್ಕಳ ಉಪಸ್ಥಿತರಿದ್ದರು.
ಈ ವಿಶೇಷ ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕಿನ ವಿವಿಧ ಗ್ರಾಮಗಳÀ 90ಕ್ಕಿಂತಲೂ ಹೆಚ್ಚು ಎಸ್.ಎಲ್.ಆರ್.ಎಮ್ ಸ್ವಚ್ಛತಾ ಕಾರ್ಯಕರ್ತರನ್ನು ಅಭಿನಂದಿಸಿ ಗೌರವಿಸಲಾಯಿತು.
ನಿಕಟ ಪೂರ್ವ ಅಧ್ಯಕ್ಷರಾದ ರೊ ಸುರೇಂದ್ರ ನಾಯಕ್ ,ರೊ.ಉಪೇಂದ್ರ ವಾಗ್ಳೆ, ರೊ.ಶ್ರೀವರ್ಮ ಅಜ್ರಿ, ರೊ.ಅಬ್ದುಲ್ ರೆಹಮಾನ್, ರೊ.ಫೆಲಿಕ್ಸ್ ವಾಜ್, ರೊ.ಕೃಷ್ಣಪ್ಪ ,ರೊ.ಇಡಿ.ಸೋಮಶೇಖರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
.ಸ್ವಚ್ಛತಾ ಕಾರ್ಯಕರ್ತೆಯರು ಪ್ರಾರ್ಥನಾ ಗೀತೆ ಹಾಡಿದರು. ರೊ.ಮಂಜುನಾಥ್ ಹೆಗ್ಡೆ ಪ್ರಾಸ್ತಾವನೆಗೈದು, ಕೃಷ್ಣಾನಂದ ಕೆ ಸ್ವಾಗತಿಸಿದರು.ರೋಟರಿ ಕ್ಲಬ್ ನ ಕಾರ್ಯದರ್ಶಿ ರೊ ಗಣೇಶ್ ಬರ್ಲಾಯ ವಂದನಾರ್ಪಣೆ ಸಲ್ಲಿಸಿದರು. ರೊ.ಮಾಧವಿ ಕಾರ್ಯಕ್ರಮ ನಿರೂಪಿಸಿದರು.





.
.
.
.
.
.
.
.
.
.
.
.
.
.
.
.
.
.
.
.
