

ಕಾರ್ಕಳ,ಅ.09:ಗಣೇಶೋತ್ಸವದ ಮೆರವಣಿಗೆಯಲ್ಲಿ ಡಿಜೆ ಸೌಂಡ್ಸ್ ವಿಚಾರದಲ್ಲಿ ಪೋಲಿಸರ ದ್ವಂದ್ವ ನೀತಿಯಿಂದ ಸಂಘಟನೆಯಲ್ಲಿ ಒಡಕು ಮೂಡಿದೆ ಮಾತ್ರವಲ್ಲದೇ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ದುಡಿಯುತ್ತಿರುವ ಕುಟುಂಬದ ಬದುಕಿಗೆ ಬರೆ ಎಳೆದಂತಾಗಿದೆ ಎಂದು ಧ್ವನಿಬೆಳಕು ಸಂಘಟನೆಯ ತಾಲೂಕು ಗೌರವಾಧ್ಯಕ್ಷ ಧರ್ಮರಾಜ್ ಕುಮಾರ್ ಆರೋಪಿಸಿದ್ದಾರೆ.
ಅವರು ಅ. 09 ರಂದು ಕಾರ್ಕಳದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ,ಗಣೇಶ ಚತುರ್ಥಿಯ ಸಂದರ್ಭ ಧ್ವನಿ ಮತ್ತು ಬೆಳಕನ್ನು ಅಳವಡಿಸುವ ಬಗ್ಗೆ ಧ್ವನಿ ಮತ್ತು ಬೆಳಕು ಸಂಘಟಕರೊಂದಿಗೆ ಪೋಲಿಸರು ಪೂರ್ವಭಾವಿ ಸಭೆಯನ್ನು ಕರೆದಿದ್ದು ಈ ಸಭೆಯಲ್ಲಿ ಧ್ವನಿ ಮತ್ತು ಬೆಳಕು ಅಳವಡಿಸುವ ಬಗ್ಗೆ ಮಾರ್ಗಸೂಚಿಯನ್ನು ತಿಳಿಸಿದ್ದು, ಅದರಂತೆ ಮೆರವಣಿಗೆಯ ಡಿಜೆಯಲ್ಲಿ ಎರಡು ಬೇಸ್ ಹಾಗೂ ಎರಡು ಟಾಪ್ ಸ್ಪೀಕರ್ ಅಳವಡಿಸುವಂತೆ ತಿಳಿಸಿದ್ದರು. ಸಂಘಟನೆಯಲ್ಲಿರುವ ಸದಸ್ಯರು ಪೋಲಿಸರ ತಿಳಿಸಿರುವ ಮಾರ್ಗಸೂಚಿಯನ್ನು ಅನುಸರಿಸಿದ್ದು, ಸಂಘಟನೆಯಲ್ಲಿ ಇಲ್ಲದ ಕೆಲವರು ಪೋಲಿಸರ ಮಾರ್ಗಸೂಚಿಯನ್ನು ಅನುಸರಿಸದೆ ವೀಪರೀತ ರೀತಿಯಲ್ಲಿ ಸೌಂಡ್ಸ್ ಹಾಗೂ ಲೈಟಿಂಗ್ಸ್‌ನ್ನು ಅಳವಡಿಸಿದ್ದು ಸಂಘಟನೆಯ ಸದಸ್ಯರ ನಡುವೆ ವೈಮನಸ್ಸಿಗೆ ಕಾರಣವಾಗಿದೆ ಎಂದರು. ಅಲ್ಲದೇ ಇನ್ನು ಕೆಲವರು ಪೋಲಿಸರ ಸಮ್ಮಖದಲ್ಲಿ ವಿಪರೀತ ಸೌಂಡ್ಸ್ ಸ್ಪಿಕರ್‌ಗಳನ್ನು ಹಾಗೂ ಲೈಟಿಂಗ್ಸ್ ಗಳನ್ನು ಅಳವಡಿಸಿ ಕಾಯಕ್ರಮ ಮಾಡಿದ್ದಾರೆ. ಇದು ಒಬ್ಬರಿಗೊಂದು ನ್ಯಾಯ ಇನ್ನೊಬ್ಬರಿಗೊಂದು ನ್ಯಾಯವೆಂಬಂತಾಗಿದೆ ಈ ನೀತಿ ಸರಿಯಲ್ಲ ಎಂದರು. ಪೋಲಿಸರ ಮಾರ್ಗಸೂಚಿಯನ್ನು ಅನುಸರಿಸದೇ ಡಿಜೆ ಮಾಡುವವರ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದ್ದು, ಅಂತವರ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೇ ಮಾಹಿತಿ ನೀಡಿದವರ ಹೇಸರನ್ನೇ ಪೋಲಿಸರು ಬಹಿರಂಗ ಪಡಿಸಿರುವುದು ಸರಿಯಲ್ಲ. ಪೊಲೀಸರ ದ್ವಂದ್ವ ನಿರ್ಧಾರದಿಂದ ನಮ್ಮ ವ್ಯವಹಾರಕ್ಕೆ ಸಮಸ್ಯೆ ಉಂಟಾಗಿದೆ ಎಂದರು.
ಗಣೇಶೋತ್ಸವದ ಮೆರವಣಿಗೆಯಲ್ಲಿ ಕೆಲವೆಡೆ ಪೋಲಿಸರು ಡಿಜೆಯನ್ನು ನಿಲ್ಲಿಸಿದ್ದಾರೆ. ಇನ್ನು ಕೆಲವೆಡೆ ಪೋಲಿಸರ ಸಮ್ಮುಖದಲ್ಲಿ ವಿಪರೀತ ಸೌಂಡ್ಸ್ ಸ್ಪಿಕರ್‌ಗಳನ್ನು ಅಳವಡಿಸಿ ಡಿಜೆ ಮಾಡಿದ್ದಾರೆ ಕಾನೂನನ್ನು ಪಾಲಿಸುವುದಿದ್ದಲ್ಲಿ ಒಂದೇ ರೀತಿ ಪಾಲಿಸಲಿ ಎಂದರು.
ಮುಂದೆ ಬರಲಿರುವ ನವರಾತ್ರಿ ಸಂದರ್ಭದಲ್ಲಿ ಇಂತಹ ಸಮಸ್ಯೆ ಉಂಟಾಗದಂತೆ ಪೋಲಿಸರು ಸಹಕರಿಸಬೇಕು ಮಾರ್ಗಸೂಚಿಯನ್ನು ಪ್ರತಿಯೊಬ್ಬರು ಪಾಲಿಸುವಂತೆ ಪೋಲಿಸರು ಕ್ರಮ ಕೈಗೊಳ್ಳಬೆಕೆಂದು ಅವರು ತಿಳಿಸಿದರು.
ಸಂಘಟನೆಯ ಅಧ್ಯಕ್ಷ ನವೀನ್ ಲೋಬೋ, ಕಾರ್ಯದರ್ಶಿ ಪ್ರದೀಪ ಕರ್ಕೇರ, ಜೋತೆ ಕಾರ್ಯದರ್ಶಿ ಕೆ.ಪಿ. ಯಜ್ಞೇಂದ್ರ, ಕೊಶಾಧಿಕಾರಿ ರಾಜೇಶ್ ಮೊಲಿ, ರಾಜ್ಯ ಪ್ರತಿನಿಧಿ ತಾಜುದ್ದೀನ್, ಸದಸ್ಯ ಕಿಶೋರ ಶೆಟ್ಟಿ ಉಪಸ್ಥಿತರಿದ್ದರು





.
.
.
.
.
.
.
.
.
.
.
.
.
.
.
.
.
.
.
.
